More

    ಶರಣರ ವಿಚಾರ ಸಾರ್ವಕಾಲಿಕ ಸತ್ಯ

    ಮಾಂಜರಿ: ಬಸವಾದಿ ಶರಣರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯವಾಗಿದ್ದು, ಅವುಗಳನ್ನು ಅರಿತು ನಡೆದಲ್ಲಿ ಪ್ರತಿಯೊಬ್ಬರ ಜೀವನ ಶ್ರೇಷ್ಠವಾಗಲಿದೆ ಎಂದು ಕೆಎಲ್ಇ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

    ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, 12ನೇ ಶತಮಾನದಲ್ಲಿ ಜನರೆಡೆಗೆ ತಲುಪದೇ ಇದ್ದ ಸಾಹಿತ್ಯವನ್ನು ಸರಳ ಭಾಷೆಗೆ ಇಳಿಸಿ, ಜನರಲ್ಲಿದ್ದ ಮೌಢ್ಯವನ್ನು ತೊಳೆಯಲು ಶ್ರಮಿಸಿದ ಬಸವಾದಿ ಶರಣರ ಜೀವನ ಪಥ ಇಂದು ನಮಗೆಲ್ಲರಿಗೂ ದಾರಿ ದೀಪವಾಗಿದೆ ಎಂದರು.

    ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ನೀಡಲಿರುವ ಬೆಳಗಾವಿ ಕಾರಂಜಿ ಮಠದ ಡಾ. ಶಿವಶರಣ ದೇವರು ಮಾತನಾಡಿ, ಶರಣ ಸಂಸ್ಕೃತಿ ವಿಚಾರದ, 12ನೇ ಶತಮಾನದಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವದ ತತ್ತ್ವಗಳನ್ನು ಮನುಕುಲಕ್ಕೆ ಧಾರೆ ಎರೆದ ಶರಣರ ಕೊಡುಗೆ ಅಪಾರವಾದುದು. ಅಂದು ಸಂಸ್ಕೃತದಲ್ಲಿದ್ದ ವಚನಗಳನ್ನು ಸರಳಿಕರಿಸಿ ಜನಸಾಮಾನ್ಯರು ಆಡುವ ಭಾಷೆಗೆ ಇಳಿಸಿದ ಬಸವಾದಿ ಶರಣರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

    ಪರಸ್ಪರ ಅಸೂಯೆ, ಮತ್ಸರ, ದ್ವೇಷಗಳನ್ನು ಬಿತ್ತಿ ಬೆಳೆಯುತ್ತ ಜೀವನವನ್ನು ಕ್ಷಣಿಕವಾಗಿಸುತ್ತಿರುವ ಮನುಷ್ಯ, ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಇತ್ಯಾದಿ ಶರಣರ ವಚನಗಳ ಸಂದೇಶಗಳನ್ನು ಅರಿತು ಸುಂದರ ಬದುಕು ಕಟ್ಟಿಕೊಳ್ಳುವ ಮೂಲಕ ಸಮೃದ್ಧ ನಾಡು ಕಟ್ಟುವತ್ತ ಮುಂದಾಗಬೇಕು ಎಂದರು.

    ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯ ಪ್ರಕಾರಗಳು ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಭಂಡಾರವಾಗಿವೆ. ಜನಹಿತಕ್ಕಾಗಿಯೇ ಜೀವಿಸಿದ ಬಸವಾದಿ ಶರಣರ ಬದುಕು ಮನುಷ್ಯ ಕುಲಕ್ಕೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುತ್ತವೆ ಎಂದು ಹೇಳಿದರು.

    ಅಂಕಲಿ ಗ್ರಾಪಂ ಸದಸ್ಯ ಸುರೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ ಮಹಾಂತೇಶ ಪಾಟೀಲ, ಶೈಲಜಾ ಪಾಟೀಲ, ನಾಗೇಶ ಮುಜುಕರ, ತುಕಾರಾಮ ಪಾಟೀಲ, ವಿವೇಕ ನಷ್ಠೆ, ಅಣ್ಣಾಸಾಹೇಬ ಜಕಾತೆ, ಪಿಂಟು ಹಿರೇಕುರುಬರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts