More

    ಶರಣರ ವಚನ ಅಳವಡಿಸಿಕೊಳ್ಳಬೇಕು

    ಬೈಲಹೊಂಗಲ: ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುರಗೋಡ ದುರುದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.

    ತಾಲೂಕಿನ ಬೈಲವಾಡ ಗ್ರಾಮದಲ್ಲಿ ಪತ್ರಿ ಬಸವನಗರ ಅಭಿವೃದ್ಧಿ ಸಂಘ, ಬೆಳಗಾವಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ .ಗು.ಹಳಕಟ್ಟಿ ಜನ್ಮ ಶತಮಾನೋತ್ಸವ ಹಾಗೂ ಪತ್ರಿ ಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವ ಅಂಗವಾಗಿ ಮನೆ, ಮನೆಗೆ ಕದಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಜಿಲ್ಲಾ ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ರಾಜೇಶ್ವರಿ ಮಹಾಂತೇಶ ಕವಟಗಿಮಠ ಮಾತನಾಡಿ, .ಗು.ಹಳಕಟ್ಟಿ ವಚನ ಸಾಹಿತ್ಯಗಳನ್ನು ರಕ್ಷಿಸಿ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು. ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಪ್ರೇಮಾ ಅಂಗಡಿ, ತಾಲೂಕಾಧ್ಯಕ್ಷೆ ಮೀನಾಕ್ಷಿ ಕುಡಸೋಮಣ್ಣವರ ಸಂಘಟನೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.

    ಶೈಲಾ ಪಾಟೀಲ, ಮಹಾಂತೇಶ ಪಾಟೀಲ, ಕಿತ್ತೂರು ತಾಲೂಕು ಕಸಾಪ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಮಾತನಾಡಿದರು. ಶಿವಾನಂದ ಕುಡಸೋಮಣ್ಣವರ, ಬಸಣ್ಣ ಬೆಲ್ಲದ, ಗಂಗಣ್ಣ ಮದ್ನಳ್ಳಿ, ಸುರೇಶ ಮುದಕನಗೌಡರ, ಮಹಾಬಳೇಶ್ವರ ಗಿರೆಪ್ಪಗೌಡರ, ಶ್ರೀಶೈಲ ಶರಣಪ್ಪನವರ, ತಮ್ಮನಗೌಡ ಪಾಟೀಲ, ಕಾಡಪ್ಪ ರಾಮಗುಂಡಿ, ನಿರ್ಮಲಾ ಕರೀಕಟ್ಟಿ, ನೀಲವ್ವ ಪಾಟೀಲ, ಮಲ್ಲಪ್ರಭಾ ಪಾಟೀಲ, ಸಂಗಮ ಗರ್ಜೂರ, ಅನ್ನಪೂರ್ಣಾ ಖನೋಜ, ಸುಜಾತಾ ಅಕ್ಕಿ, ಗೌರಾದೇವಿ ತಾಳಿಕೋಟಿಮಠ, ಗೌರಮ್ಮ ಕರ್ಕಿ, ಮಧು ಹಿರೇಮಠ, ನೈನಾ ಗಿರಿಗೌಡರ, ಸುವರ್ಣ ಬಿಸಗುಪ್ಪಿ, ರಾಜೇಶ್ವರಿ ದ್ಯಾಮನಗೌಡರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts