More

    ಶರಣರ ವಚನಗಳು ನಮಗೆ ದಾರಿ ದೀಪ

    ಯಾದಗಿರಿ: ಶರಣರ ವಚನಗಳು ನಮಗೆ ದಾರಿ ದೀಪವಾಗಿದ್ದು, ಅವರ ಮಾರ್ಗದಲ್ಲಿ ನಡೆದಲ್ಲಿ ನಾವು ಬದುಕನ್ನು ಸುಲಭವಾಗಿ ಅಥರ್ೈಸಿಕೊಳ್ಳಬಹುದಾಗಿದೆ ಎಂದು ಬಂಡಾಯ ಸಾಹಿತಿ ವಿಶ್ವನಾಥರೆಡ್ಡಿ ಗೊಂದೆಡಗಿ ತಿಳಿಸಿದರು.

    ಸೋಮವಾರ ನಗರದ ಕಸಾಪ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸುತ್ತೂರು ಜಗದ್ಗುರು ಡಾ.ಶ್ರೀರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಜರುಗಿದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನ ಎಲ್ಲ ತತ್ವ, ಸಿದ್ಧಾಂತಗಳು ಕರ್ಮದ ಬಗೆಗೆ ಹೇಳುತ್ತವೆ. ಆದರೆ, ಬಸವಾದಿ ಶರಣರ ವಚನಗಳು ಬದುಕಿನಲ್ಲಿ ಹತಾಶರಾದವರಿಗೆ ಪ್ರೇರಣೆ ನೀಡುತ್ತವೆ ಎಂದರು.


    ಕತ್ತಲಲ್ಲಿದ್ದವರಿಗೆ ಬೆಳಕಿನೆಡೆಗೆ ಒಯ್ಯುವ ಸಾಮಥ್ರ್ಯ ಶರಣರ ವಚನಗಳಿಗೆ ಇವೆ. ಅಲ್ಲದೆ ಎಲ್ಲರನ್ನೂ ಮನುಷ್ಯತ್ವದಿಂದ ನೋಡುವಂತೆ ಮಾಡಿವೆ. ಶರಣರು ತಮ್ಮ ಬದುಕಿನಲ್ಲಿ ಅನೇಕ ಸಂಕಷ್ಟ ಎದುರಿಸಿ ವಚನಗಳನ್ನು ರಚಿಸಿದ್ದಾರೆ. ಅವುಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ವಚನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

    ಕಥೆಗಾರ ಮಹಾಂತೇಶ ನವಲಕಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರು ಮೌಢ್ಯಗಳನ್ನು ಜನರ ಮನದಲ್ಲಿಂದ ಓಗಲಾಡಿಸಲು ಸಾಕಷ್ಟು ಪ್ರಯತ್ನ ಪಟ್ಟು ಯಶಸ್ವಿಯಾಗಿದ್ದಾರೆ ಅವರ ವಚನಗಳು ನಮಗೆ ದಾರಿ ದೀಪಗಳಾಗಿವೆ ಎಂದರು.

    ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಮಾತನಾಡಿ, ಡಾ.ರಾಜೇಂದ್ರ ಸ್ವಾಮಿಗಳ ಜನ್ಮದಿನದದ ನಿಮಿತ್ತ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮ ಆಚರಿಸಲಾಗಿದೆ. ನಾಡಿಗೆ ವಚನ ಸಾಹಿತ್ಯ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ವಚನ ಗಾಯನ ಸ್ಪಧರ್ೆಗಳನ್ನು ಏರ್ಪಡಿಸುವ ಚಿಂತನೆ ಇದೆ ಎಂದರು.

    ಸಾಹಿತಿ ಡಾ.ಗಾಳೆಪ್ಪ ಪೂಜಾರಿ, ಸುರೇಶ ತಡಿಬಿಡಿ, ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ, ಡಾ.ಎಸ್.ಎಸ್.ನಾಯಕ, ಡಾ.ಭೀಮರಾಯ ಲಿಂಗೇರಿ, ಮಹಾದೇವಪ್ಪಗೌಡ ಅಬ್ಬೆತುಮಕೂರು, ಅಯ್ಯಣ್ಣ ಹುಂಡೆಕಾರ, ಡಾ.ವೆಂಕಟೇಶ ಕಲಾಲ, ನೂರೊಂದಪ್ಪ ಲೆವಡಿ, ಬಸವರಾಜ ಮೋಟ್ನಳ್ಳಿ, ದೇವು ವರ್ಕನಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts