More

    ಶಕ್ತಿ ಯೋಜನೆ ಸಂಪೂರ್ಣ ಅನುದಾನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

    ಚಿತ್ರದುರ್ಗ: ಮೂವತ್ತೆಂಟು ತಿಂಗಳ ವೇತನ ಹೆಚ್ಚಳದ ಬಾಕಿ ಬಿಡುಗಡೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.
    ಕಳೆದ 2020 ಜ.1ರಿಂದ 2023 ಫೆ.28ರವರೆಗಿರುವ,ಶೇ.15 ವೇತನ ಹೆಚ್ಚಳ ಬಾಕಿ ಬಿಡುಗಡೆಗೆ ಆಗ್ರಹಿಸಿದ ನೌಕರರು,ರಾಜ್ಯಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲವೆಂದು ದೂರಿದರು. 2024 ಜ.ರಿಂದ 2024ರಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಹೊಸ ವೇತನ ಪರಿಷ್ಕರಣೆಯಾಗಬೇಕು.
    ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸುವ ಕೇಂದ್ರದ ಉದ್ದೇಶಿತ ಕಾಯ್ದೆ ತಿದ್ದುಪಡಿ ಕೈಬಿಡಬೇಕು. 2020 ಜ.1ರಿಂದ 2023 ಫೆ.
    28ರ ಅವಧಿಯೊಳಗೆ ನಿವೃತ್ತಿ ಹೊಂದಿದ ನೌಕರರಿಗೆ ವೇತನ ಪರಿಷ್ಕರಣೆ ಅಳವಡಿಸಿ, ನಿವೃತ್ತಿ ಸೌಲಭ್ಯಗಳನ್ನು ಬಾಕಿಯೊಂದಿಗೆ ಕೊಡಬೇಕು. ಶಕ್ತಿ ಯೋಜನೆ ಸಂಪೂರ್ಣ ಅನುದಾನ ಪಾವತಿಸ ಬೇಕು. 2024 ಜ.1ರಿಂದ ಹೊಸ ವೇತನ ಜಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆ ಗ್ರಹಿಸಿದರು.
    ರಾಜ್ಯರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿಕ್ರಿಯಾ ಸಮಿತಿ ಅಧ್ಯಕ್ಷ ಕಾಂತರಾಜ್,ಗೌರವಾಧ್ಯಕ್ಷ ರಹೀಂಸಾಬ್,ಪ್ರಧಾನ ಕಾರ‌್ಯ ದರ್ಶಿ ಟಿ.ಅಶೋಕ,ಟಿ.ಅಜ್ಜಣ್ಣ,ಮೂರ್ತಿನಾಯ್ಕ,ತಮ್ಮಣ್ಣ,ಚಂದ್ರಕಲಾ,ಮನೋಹರ್,ಪಾಲಯ್ಯ,ಗೌಡಪ್ಪ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts