More

    ವ್ಯಾಪಾರೀಕರಣವಾಗಿರುವ ಪ್ರಸ್ತುತ ರಾಜಕಾರಣ

    ಕೊಳ್ಳೇಗಾಲ: ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಪ್ರಜಾಕೀಯ ಪಕ್ಷಕ್ಕೆ ಜನರು ಮತ ನೀಡಬೇಕಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಅಭ್ಯರ್ಥಿ ವಿ.ವಿನಯ್ ಕುಮಾರ್ ಮನವಿ ಮಾಡಿದರು.

    ಪ್ರಸ್ತುತ ರಾಜಕಾರಣ ವ್ಯಾಪಾರೀಕರಣವಾಗಿ ಮಾರ್ಪಟಿದೆ. ಜನಪ್ರತಿನಿಧಿಗಳು ಚುನಾವಣೆಗೆ ನಿಲ್ಲಲ್ಲು ಕೋಟಿ ಕೋಟಿ ಹಣ ವ್ಯಯಿಸುತ್ತಾರೆ. ನಂತರ, ಗೆದ್ದವರು ಜನರಿಗಾಗಿ ಏನೂ ಮಾಡೋಲ್ಲ. ಜನರು ಅವರನ್ನು ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಜನರು ಪ್ರಜಾಕೀಯ ಪಕ್ಷವನ್ನು ಬೆಂಬಲಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ರಾಜ್ಯದ 160 ಕ್ಷೇತ್ರದಲ್ಲಿ ಉತ್ತಮ ಪ್ರಜಾಕೀಯ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಅಂತೆಯೇ, ನಾನು ಕೊಳ್ಳೇಗಾಲ ಕ್ಷೇತ್ರದ ಅಭ್ಯರ್ಥಿಯಾಗಿದ್ದೇನೆ. ಎಲ್ಲ ಕಡೆ ಉತ್ತಮ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ನಟ ಉಪೇಂದ್ರ ಅವರು ಈ ಪಕ್ಷದ ಸಂಸ್ಥಾಪಕರಾಗಿದ್ದಾರೆ. ಜನರಿಗಾಗಿ ತರಲಾದ ಈ ಪಕ್ಷವನ್ನು ಜನರೇ ಮುನ್ನೆಡಿಸಿಕೊಂಡು ಹೋಗುತ್ತಾರೆ ಎಂದರು.

    ಜಾತಿ, ಧರ್ಮದ ಹೆಸರೇಳಿ ಪ್ರಜಾಕೀಯ ಪಕ್ಷವು ಮತ ಕೇಳುವುದಿಲ್ಲ. ಹಣವನ್ನು ನೀಡುವುದಿಲ್ಲ. ಪಕ್ಷದ ಜವಾಬ್ದಾರಿ ಹೊರಲು ಸಿದ್ಧ್ದವಿರುವವರು ಪ್ರಜಾಕೀಯಕ್ಕೆ ಮತನೀಡಿ. ಪಕ್ಷದಲ್ಲಿ ಶಾಸಕರಾದವರು 9 ಅಂಶವುಳ್ಳ ಕಾರ್ಯವೈಖರಿಗೆ ಅನುಗುಣವಾಗಿ ಕೆಲಸಮಾಡಬೇಕಿದೆ. ಒಂದು ವೇಳೆ 9 ಅಂಶ ಪ್ರಕಾರ ಕೆಲಸ ನಿರ್ವಹಿಸದೆ ಇದ್ದಲ್ಲಿ 6 ತಿಂಗಳ ನಂತರ ಜನರೇ ಮಾಡುವ ಸರಳ ಪೋಲಿಂಗ್‌ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೇಳುವ ಹಕ್ಕು ಜನರ ಕೈಯಲ್ಲೇ ಇರುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts