More

    ವ್ಯಾಪಾರದಲ್ಲಿ ಮಾನವೀಯತೆ ಇರಲಿ

    ಯಾದಗಿರಿ : ನಾವು ಮಾಡುವ ವ್ಯಾಪಾರದಲ್ಲಿ ಮಾನವೀಯತೆ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಅಬ್ಬೆತುಮಕೂರು ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ತಿಳಿಸಿದರು.

    ನಗರದ ಅಮರ್ ಲೇಔಟ್ನಲ್ಲಿ ಗುರುವಾರ ಶಶಿ ಸೂಪರ್ ಬಜಾರ್ನ ನೂತನ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಯಾವುದೇ ವ್ಯಾಪಾರ ಮಾಡಿದರೂ ಅದರಲ್ಲಿ ಮಾನವೀಯತೆ ಹಾಗೂ ಶ್ರದ್ಧೆ ಇರಬೇಕು. ಅಂದಾಗ ಅದರಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಿದರೆ ಅಂಥ ಉದ್ಯಮ ಅಲ್ಪ ಅವಧಿಯಲ್ಲೇ ಸಾಧನೆ ಶಿಖರವೇರಲಿದೆ ಎಂದು ನುಡಿದರು.

    ಶಶಿ ಸೂಪರ್ ಬಜಾರ್ ಕಳೆದೊಂದು ದಶಕದ ಹಿಂದೆ ಆರಂಭಗೊಂಡಾಗ ನಮ್ಮಿಂದಲೇ ಉದ್ಘಾಟನೆಗೊಂಡಿತ್ತು. ಇಂದು ಶಿರಗೋಳ ಅವರ ಮಾಲೀಕತ್ವದಲ್ಲಿ ಮತ್ತೊಂದು ಶಾಖೆ ಆರಂಭಿಸಿರುವುದು ಸಂತಸದ ಸಂಗತಿ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸ್ವಾಭಿಮಾನಿಯಾಗಿ ಜೀವನ ಸಾಗಿಸಲು ಶಶಿ ಸಹೋದರರು ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

    ಮಲ್ಲಿಕಾರ್ಜುನ ಶಿರಗೋಳ ಮಾತನಾಡಿ, ಗ್ರಾಹಕರಿಗೆ ಗುಣಮಟ್ಟದ ವಸ್ತುಗಳು ನೀಡುವುದು ನಮ್ಮ ಮಳಿಗೆ ಧ್ಯೇಯ. ಹೀಗಾಗಿಯೇ ಶಶಿ ಸೂಪರ್ ಬಜಾರ್ ಅಲ್ಪಾವಧಿಯಲ್ಲಿ ನಗರದ ಜನರ ಮನ ಗೆದ್ದಿದೆ. ಈ ಸೇವೆಯನ್ನು ಹೀಗೆ ಮುಂದುವರೆಸಲಿದ್ದೇವೆ ಎಂದರು.

    ಪ್ರಮುಖರಾದ ಚನ್ನಪ್ಪಗೌಡ ಮೋಸಂಬಿ, ಎಸ್.ಎಸ್.ಮಿಂಚನಾಳ, ಡಾ.ಸುಭಾಶ್ಚಂದ್ರ ಕೌಲಗಿ, ಹಣಮಂತಪ್ಪ ಶಿರಗೋಳ, ಶಶಿ ಶಿರಗೋಳ ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts