More

    ವೈಯಕ್ತಿಕ ಟೀಕೆ ನಮ್ಮ ಉದ್ದೇಶವಾಗಿರಲಿಲ್ಲ


    ಬೆಳಗಾವಿ: ಪೆಗಾಸಸ್‌ನಲ್ಲಿ 100 ರಾಜಕೀಯ ನಾಯಕರು, 500 ಪತ್ರಕರ್ತರು ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಟೆಲಿಫೋನ್ ಕದ್ದಾಲಿಕೆ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯಿಸಲಾಗಿತ್ತು. ಸದನದಲ್ಲಿ ವೈಯಕ್ತಿಕ ಟೀಕೆ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದರು.

    ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಅವರು ‘ವಿಪಕ್ಷಗಳು ಸದನದಲ್ಲಿ ತಲೆ ತಗ್ಗಿಸುವಂತೆ ವರ್ತಿಸಿದ್ದಾರೆ’ ಎಂದು ಹೇಳಿಕೆ ನೀಡಿದ್ದು ಸರಿ ಅಲ್ಲ. ಕಾಂಗ್ರೆಸ್ ಒಳಗೊಂಡು ಎಲ್ಲ ವಿಪಕ್ಷಗಳು ಪೆಟ್ರೋಲ್ ಬೆಲೆ ಏರಿಕೆ, ನೂತನ ಕೃಷಿ ಕಾನೂನು, ಪೆಗಾಸಸ್ ಬಗ್ಗೆ ಚರ್ಚೆ ಆಗಬೇಕೆಂದು ಒತ್ತಾಯಿಸಿದವು.

    ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಲಿಲ್ಲ. ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಜೆಪಿಯವರು ಚಳಿಗಾಲ ಅಧಿವೇಶನ ನಡೆಸಲು ಬಿಡಲಿಲ್ಲ ಎಂದು ತಿರುಗೇಟು ನೀಡಿದರು. ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಪೆಗಾಸಸ್ ವಿಚಾರ ಚರ್ಚೆಯಾಗಿ ಸತ್ಯ ಹೊರ ಬಂದರೆ ಪ್ರಧಾನ ಮಂತ್ರಿ ಸ್ಥಾನಕ್ಕೆ ನರೇಂದ್ರ ಮೋದಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಪೆಗಾಸಸ್ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

    ಪ್ರಶ್ನೆ ಕೇಳುವುದು ವಿಪಕ್ಷಗಳ ಹಕ್ಕು. ಉತ್ತರ ಕೊಡುವುದು ಸರ್ಕಾರದ ಕರ್ತವ್ಯ. ಉತ್ತರ ಕೊಡದಿದ್ದರೆ ಪ್ರತಿಭಟನೆ ಮಾಡುವುದು ವಿಪಕ್ಷಗಳ ಹಕ್ಕು ಎಂದು ಯುಪಿಎ ಸರ್ಕಾರ ಇದ್ದಾಗ ಅರುಣ ಜೇಟ್ಲಿ ಅವರೇ ಹೇಳಿದ್ದಾರೆ. ಹೀಗಾಗಿ ವಿಪಕ್ಷಗಳು ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ. ಪೆಗಾಸಸ್ ವಿಚಾರವೇ ಮೊದಲು ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.

    ವಿಮೆ ಬಿಲ್ ಸದನದಲ್ಲಿ ಪಾಸ್ ಮಾಡಿದ್ದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ರಾಜ್ಯಸಭೆ, ಲೋಕಸಭೆ ಕಲಾಪ ಗೊತ್ತಿಲ್ಲದ ಮಾರ್ಷಲ್ಗಳನ್ನು ಬಳಸಿಕೊಂಡಿದ್ದಾರೆ. ಟೆಲಿಫೋನ್ ಕದ್ದಾಲಿಕೆಯಿಂದ ರಾಮಕೃಷ್ಣ ಹೆಗಡೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದರು. ಯುಪಿಎ-2 ಸರ್ಕಾರ ಇದ್ದಾಗ ಬಿಜೆಪಿಯವರು ಹೆಚ್ಚಿನ ಅವಧಿ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಹರಿಹಾಯ್ದರು. ರಾಜ್ಯಸಭಾ ಸದಸ್ಯ ನಾಸೀರ ಹುಸೇನ್, ಮಾಜಿ ಸಚಿವ ಎಂ.ಬಿ.ಪಾಟೀಲ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಫಿರೋಜ್ ಸೇಠ್ ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts