More

    ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಿರಿ

    ಯಾದಗಿರಿ: ಹೊಸ ವರ್ಷ ಗ್ರಾಮೀಣ ಪ್ರದೇಶದ ಎಲ್ಲ ಕೂಲಿ ಕಾಮರ್ಿಕರ ಬಾಳಲ್ಲಿ ಸುಖ, ಸಮೃದ್ಧ, ನೆಮ್ಮದಿ ತರಲಿ ಎಂದು ತಾಪಂ ಇಒ ಬಸವರಾಜ ಶರಬೈ ತಿಳಿಸಿದರು.
    ಮಂಗಳವಾರ ತಾಲೂಕಿನ ವರ್ಕನಳ್ಳಿ ಗ್ರಾಪಂ ವ್ಯಾಪ್ತಿಯ ಕೊಯಿಲೂರು ಗ್ರಾಮದಲ್ಲಿ ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿ ಪ್ರಗತಿಯಲ್ಲಿದ್ದ ಹಳ್ಳದ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾಮರ್ಿಕರೊಡನೆ ಆಯೋಜಿಸಿದ್ದ ಹೊಸ ವರ್ಷ ಆಚರಣೆಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕೂಲಿಕಾರರಿಗೆ ಮೂರು ತಿಂಗಳು ಸತತವಾಗಿ ಕೆಲಸ ನೀಡಲಾಗುತ್ತದೆ. ಜಾಬ್ಕಾಡರ್್ ಹೊಂದಿರುವ ಪ್ರತಿ ಕುಟುಂಬಗಳು ವರ್ಷದಲ್ಲಿ 100 ದಿನಗಳ ಕೆಲಸ ಮಾಡಿದರೆ, 31600 ರೂ.ಗಳ ಕೂಲಿ ಹಣ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

    ನರೇಗಾದಡಿ ವೈಯಕ್ತಿಕ ಕಾಮಗಾರಿಗಳಾದ ಕ್ಷೇತ್ರ ಬದು, ಕೃಷಿ ಹೊಂಡ, ದನದ ಕೊಟ್ಟಿಗೆ, ಕುರಿ ಮೇಕೆ,ಕೋಳಿ, ಹಂದಿ ಶೆಡ್ಡುಗಳು, ಬಚ್ಚಲ ಗುಂಡಿ ಸೇರಿ ಇತರೆ ಕಾಮಗಾರಿಗಳನ್ನು ಯೋಜನೆಯಲ್ಲಿ ಅಗತ್ಯವಾದ ಕಾಮಗಾರಿ ಹೆಸರು ಬರೆದು ಪಂಚಾಯಿತಿಯಲ್ಲಿನ ಕಾಮಗಾರಿ ಬೇಡಿಕೆ ಪೆಟ್ಟಿಗೆಯಲ್ಲಿ ಹಾಕಬಹುದು. ಜಾಬ್ಕಾಡರ್್ ಹೊಂದಿದ ಗ್ರಾಮೀಣ ಕುಟುಂಬವು ಜೀವಿತ ಅವಧಿಯಲ್ಲಿ 5 ಲಕ್ಷ ರೂ.ಗಳ ಮಿತಿಯ ವರೆಗೆ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

    ಕೂಲಿಯ ಮೊತ್ತದ ಜತೆಗೆ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಂಡು, ನಗರ ಪಟ್ಟಣಗಳಿಗೆ ಕೂಲಿ ಕೆಲಸ ಅರಸಿ ಹೊಲಸೆ ಹೋಗದೆ ನಿಮ್ಮ ಗ್ರಾಮದಲ್ಲಿದ್ದು ಕೆಲಸ ಮಾಡಿ ಆಥರ್ಿಕವಾಗಿ ಸದೃಢವಾಗಬಹುದು ಎಂದು ಕಿವಿಮಾತು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts