More

    ವೈದ್ಯರಿಗಿದೆ ಅತ್ಯಂತ ಗೌರವದ ಸ್ಥಾನ

    ಬಸವಕಲ್ಯಾಣ: ಸಮಾಜಕ್ಕೆ ಒಳ್ಳೆಯ ರಾಜಕಾರಣಿ, ಡಾಕ್ಟರ್ ಮತ್ತು ಪೊಲೀಸರ ಅಗತ್ಯವಿದೆ. ಹೆಸರಿನ ಮುಂದೆ ಎಷ್ಟೇ ಪದವಿಗಳಿದ್ದರೂ ನಿಮ್ಮ ಹಿಂದೆ ಒಳ್ಳೆಯ ವೈದ್ಯರು ಎಂದು ಜನ ಮಾತಾಡುವಂತಾಗಬೇಕು. ಅಂಥ ಉತ್ತಮ ವೈದ್ಯರು ನೀವಾಗಿ ಎಂದು ಶಾಸಕ ಶರಣು ಸಲಗರ ಹೇಳಿದರು.

    ಶ್ರೀ ಬಸವೇಶ್ವರ ಪಿಯು ಕಾಲೇಜು ಮೈದಾನದಲ್ಲಿ ಶುಕ್ರವಾರ ಮಹಾತ್ಮ ಬಸವೇಶ್ವರ ಜಾತ್ರೆ ನಿಮಿತ್ತ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ(ಬಿಡಿಪಿಸಿ) ಹಾಗೂ ವಿಶ್ವಸ್ಥ ಸಮಿತಿ ಆಯೋಜಿಸಿದ್ದ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸಹಯೋಗದಡಿ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

    ವೈದ್ಯರು ಎರಡನೇ ದೇವರು ಎಂಬ ಭಾವನೆ ಸಮಾಜದಲ್ಲಿದೆ. ವೈದ್ಯರಿಗೆ ಅತ್ಯಂತ ಗೌರವದ ಸ್ಥಾನವಿದೆ. ಆದರೆ ಇಂದು ದೊಡ್ಡದೊಡ್ಡ ಆಸ್ಪತ್ರೆಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಶಾಸಕರು, ನಂಬಿಕೆ, ವಿಶ್ವಾಸದಿಂದ ನಿಮ್ಮ ಬಳಿ ಬರುವವರಿಗೆ ಸೂಕ್ತ ಚಿಕಿತ್ಸೆ ನೀಡಿ ವಿಶ್ವಾಸ ಗಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಮಕ್ಕಳ ತಜ್ಞ ಡಾ.ಜಿ.ಎಸ್. ಭುರಳೆ ಮಾತನಾಡಿ, ಜಾತ್ರೆ ನಿಮಿತ್ತ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಜಿಲ್ಲೆಯ ತಜ್ಞ ವೈದ್ಯರು ಭಾಗವಹಿಸಿದ್ದಾರೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

    ಟಿಎಚ್ಒ ಡಾ.ಪ್ರವೀಣ ಹೂಗಾರ, ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ಅಧ್ಯಕ್ಷ ಅನೀಲಕುಮಾರ ರಗಟೆ ಮಾತನಾಡಿದರು. ತಹಸೀಲ್ದಾರ್ ಸಾವಿತ್ರಿ ಸಲಗರ, ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ಕಿರಣ ಪಾಟೀಲ್, ಜಿಲ್ಲಾ ನೋಡಲ್ ಅಧಿಕಾರಿ ಡಾ.ಸಂಜುಕುಮಾರ ಪಾಟೀಲ್, ಸಕರ್ಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಅಪಣರ್ಾ, ತಜ್ಞ ವೈದ್ಯರಾದ ನಿತೀನ್ ಗುದಗೆ, ಡಾ.ಕೈಲಾಸ ಬನಾಳೆ, ಡಾ.ರವಿಕುಮಾರ, ಡಾ.ಸದಾನಂದ ಪಾಟೀಲ್, ಡಾ.ಪೃಥ್ವಿರಾಜ ಬಿರಾದಾರ, ಡಾ.ಸಂದೀಪ ರಂಗದಾಳ, ಡಾ.ಮಹೇಶ ತೊಂಡಾರೆ, ಡಾ.ಪ್ರಶಾಂತ, ಡಾ.ನಾಗರಾಜ, ಡಾ.ಸಂಗಮೇಶ ತೊಂಡಾರೆ, ಡಾ.ಜ್ಯೋತಿ ಖಂಡ್ರೆ, ಡಾ.ಗಿರೀಶ ಭುರಳೆ, ಡಾ.ಶಿವರಾಜ ಮಾಲಿಪಾಟೀಲ್, ಡಾ.ಅಜಯ ಕುರಕೋಟೆ, ಡಾ.ಸಂಗೀತಾ ಮಂಠಾಳೆ, ಡಾ.ನಂದಿನಿ ಪಾಟೀಲ್, ಡಾ.ಶ್ರದ್ಧಾ ರಂಗದಾಳ, ಡಾ.ಸಂಗಮೇಶ ತಾಂಬೋಳೆ, ಬಿಡಿಪಿಸಿ ಉಪಾಧ್ಯಕ್ಷ ಅಶೋಕ ನಾಗರಾಳೆ, ಕಾರ್ಯದರ್ಶಿ ರೇವಣಪ್ಪ ರಾಯವಾಡೆ, ಕೋಶಾಧ್ಯಕ್ಷ ಸುಭಾಷ ಹೊಳಕುಂದೆ ಇತರರಿದ್ದರು.

    ಬಸವರಾಜ ಬಾಲಿಕಿಲೆ ಸ್ವಾಗತಿಸಿದರು. ಜ್ಯೋತಿ ತೂಗಾಂವೆ ನಿರೂಪಣೆ ಮಾಡಿದರು. ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಬೃಹತ್ ಆರೋಗ್ಯ ಮೇಳದಲ್ಲಿ 1,713 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

    62 ಜನರಿಂದ ರಕ್ತದಾನ: ಶಾಸಕ ಸಲಗರ ಸೇರಿ 62 ಜನ ರಕ್ತದಾನ ಮಾಡಿದರು. 103 ಜನ ಸಾಮಾನ್ಯ ತಪಾಸಣೆ, 118 ಜನ ಹೃದ್ರೋಗ, 24 ಜನ ಕಿಡ್ನಿ, 47 ಜನ ರೇಡಿಯಾಲಜಿ, 112 ಜನ ನೇತ್ರ, 74 ಜನ ಎಲುಬು-ಕೀಲು, 18 ಜನ ಮಧುಮೇಹ ತಪಾಸಣೆ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts