More

    ವೇತನ ತಾರತಮ್ಯ ನಿವಾರಣೆ

    ಕಾರವಾರ: ಪೊಲೀಸ್ ಅಧಿಕಾರಿ, ಸಿಬ್ಬಂದಿಯ ವೇತನ ತಾರತಮ್ಯ ಬಗೆಹರಿಸುವ ನಿಟ್ಟಿನಲ್ಲಿ ಹಣಕಾಸು ಇಲಾಖೆಯ ಜತೆಗೆ ಮಾತುಕತೆ ನಡೆಸುತ್ತೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ನಗರದ ಎಸ್​ಪಿ ಕಚೇರಿಯಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದರು. ಔರಾದ್​ಕರ್ ಸಮಿತಿ ವರದಿ ಶಿಫಾರಸಿನಂತೆ ಅಧಿಕಾರಿ, ಸಿಬ್ಬಂದಿಯ ಮೂಲವೇತನ ತಾರತಮ್ಯವನ್ನು ಈಗಾಗಲೇ ಸರಿದೂಗಿಸಲಾಗಿದೆ. ಬಡ್ತಿ ಹೊಂದಿದ ನಂತರ ಹೆಚ್ಚಿನ ಲಾಭ ದೊರೆಯುವುದಿಲ್ಲ ಎಂಬ ಬೇಸರ ಅಧಿಕಾರಿಗಳಲ್ಲಿದ್ದು, ಆ ಬಗ್ಗೆ ಹಣಕಾಸು ಇಲಾಖೆಯ ಜತೆಗೆ ರ್ಚಚಿಸಿ ಕ್ರಮ ವಹಿಸಲಾಗುವುದು ಎಂದರು.

    ಘಟ್ಟಿಯಾಗಿ ನಿಲ್ಲುವ ಕಾಯ್ದೆ ಜಾರಿ: ಮತಾಂತರದಿಂದ ಹಲವರು ಸಂಕಷ್ಟಕ್ಕೆ ಒಳಗಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕಾಯ್ದೆ ರಚಿಸಲು ಸಿದ್ಧತೆ ನಡೆಸಿದ್ದೇವೆ. ಸಾಕಷ್ಟು ಅಧ್ಯಯನ ನಡೆಸಿ ಘಟ್ಟಿಯಾಗಿ ನಿಲ್ಲುವ ಕಾಯ್ದೆ ಜಾರಿಗೆ ನಿರ್ಧರಿಸಿದ್ದೇವೆ. ಏಕೆಂದರೆ ಈಗಾಗಲೇ ಕೆಲ ರಾಜ್ಯಗಳು ಜಾರಿಗೆ ತಂದ ಕಾಯ್ದೆಯ ವಿಚಾರ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್​ನಲ್ಲಿ

    ದಾವೆ ಇದೆ. ನ್ಯಾಯಾಂಗ ಪರೀಕ್ಷೆಯನ್ನು ಗೆಲ್ಲುವಂಥ ಹಾಗೂ ಮುಂದೆ ಲವ್ ಜಿಹಾದ್ ವಿರುದ್ಧ ಪರಿಣಾಮಕಾರಿಯಾಗಿ ಜಾರಿಯಾಗುವಂಥ ಕಾಯ್ದೆ ತರಲಿದ್ದೇವೆ ಎಂದರು.

    ಮನೆ ನಿರ್ವಣಕ್ಕೆ ಕ್ರಮ: ಗೃಹ 2020 ಎಂಬ ಯೋಜನೆಯಡಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಾಗಿ 10 ಸಾವಿರ ಮನೆಗಳನ್ನು ನಿರ್ವಿುಸಲಾಗುತ್ತಿದ್ದು, ಈ ಡಿಸೆಂಬರ್​ನಲ್ಲಿ ಮುಗಿಯಲಿದೆ. ಈ ಬಜೆಟ್​ನಲ್ಲಿ ಘೊಷಿಸಿದ ಗೃಹ -2025 ಯೋಜನೆಯಂತೆ ಮುಂದಿನ ಐದು ವರ್ಷದಲ್ಲಿ 11 ಸಾವಿರ ಮನೆ ಕಟ್ಟಲು ತೀರ್ವನಿಸಲಾಗಿದೆ. 2021 ಜನವರಿಯಿಂದ ಕಾಮಗಾರಿ ಪ್ರಾರಂಭವಾಗಲಿದೆ. ಆ ಯೋಜನೆ ಮುಕ್ತಾಯವಾದ ನಂತರ ರಾಜ್ಯದ ಶೇ. 60 ರಷ್ಟು ಸಿಬ್ಬಂದಿಗೆ, ಅಧಿಕಾರಿಗಳಿಗೆ ವಸತಿ ಲಭ್ಯವಾಗಲಿದೆ ಎಂದರು.

    ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ನಿರ್ಧಾರ ಮಾಡಿದ್ದೇವೆ ಎಂದರು. ಕೋವಿಡ್ ನಿಯಮಾವಳಿಗಳಂತೆ ಹೊಸ ವರ್ಷ ಆಚರಣೆಗೆ ಅವಕಾಶ ನೀಡುವ ಕುರಿತು ಶೀಘ್ರದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್, ಎಸ್​ಪಿ ಶಿವಪ್ರಕಾಶ ದೇವರಾಜು, ಎಎಸ್​ಪಿ ಬದರಿನಾರಾಯಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts