More

    ವಿಷಮುಕ್ತ ಆಹಾರಕ್ಕಾಗಿ ಹಸುಗಳನ್ನು ಸಾಕಿ- ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆಶಯ

    ದಾವಣಗೆರೆ: ದೇಸೀ ಹಸುಗಳು ನಮಗೆ ವರದಾನವಾಗಿದ್ದು ಅವನ್ನು ಹಾಲಿಗಾಗಿ ಸಾಕದೆ ವಿಷಮುಕ್ತ ಆಹಾರಕ್ಕಾಗಿ ಸಾಕಬೇಕಿದೆ ಎಂದು ಕೊಲ್ಲಾಪುರ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
    ಭಾರತೀಯ ಕಿಸಾನ್ ಸಂಘ ಹಾಗೂ ಸಾವಯವ ಕೃಷಿಕರ ಬಳಗದಿಂದ, ತಾಲೂಕಿನ ಹೆಬ್ಬಾಳು ಗ್ರಾಮದ ವಿರಕ್ತಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗೋ ಆಧಾರಿತ ಮತ್ತು ಸಾವಯವ ಕೃಷಿಯಿಂದ ರೈತರ ಅಭಿವೃದ್ಧಿ, ಪಂಚ ಮಹಾಭೂತಗಳ ಅರಿವು ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಒಂದು ಗ್ರಾಂ ಸಗಣಿಯಲ್ಲಿ ಮೂರು ಕೋಟಿ ಜೀವಾಣುಗಳಿವೆ. ಬರಡಾಗುತ್ತಿರುವ ನಮ್ಮ ಭೂಮಿಯನ್ನ್ನು ಸಗಣಿಯಿಂದ ಫಲವತ್ತಾಗಿಸಬಹುದು. ಗೋವುಗಳಿಲ್ಲದೆ ಭೂಮಿಯ ಫಲವತ್ತತೆ ಸಾಧ್ಯವಿಲ್ಲ ಎಂದರು.
    ರೈತರು ರಾಸಾಯನಿಕಮುಕ್ತ ಬೇಸಾಯದತ್ತ ಗಮನ ಹರಿಸಬೇಕಿದೆ. ಬೆಳೆಗಳಿಗೆ ಸಾವಯವ ಕೀಟನಾಶಕ ಬಳಸಲು ಮುಂದಾಗಬೇಕು. ಒಂದು ಲೀ. ಗೋ ಮೂತ್ರವನ್ನು ನಾಲ್ಕು ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಗಳಿಗೆ ಸಿಂಪರಣೆ ಮಾಡಬೇಕು. ಗೋ ಕೃಪಾಮೃತ, ಜೀವಾಮೃತ, ಘನ ಜೀವಾಮೃತಗಳನ್ನು ತಯಾರಿಸಿ ಬೆಳೆಗಳಿಗೆ ಬಳಸಬೇಕು. ಅವು ಬೆಳೆಗಳನ್ನು ರೋಗ ಹಾಗು ಕೀಟಗಳಿಂದ ರಕ್ಷಿಸಿ ಉತ್ತಮ ಇಳುವರಿ ಬರುವಂತೆ ಮಾಡುತ್ತವೆ.
    ಮಳೆ ನೀರನ್ನ್ನು ಭೂಮಿಯಲ್ಲಿ ಇಂಗಿಸುವ ಕೆಲಸ ಆಗಬೇಕು. ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಜಾಗತಿಕ ತಾಪಮಾನ ತಗ್ಗಿಸಲು ಕೈಜೋಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚುವ ತಾಪಮಾನಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
    ದೇಸಿ ಹಸುವಿನ ಮಹತ್ವ ಕುರಿತು ಸಂಪನ್ಮೂಲ ವ್ಯಕ್ತಿ ಪ್ರಭು ಸ್ವದೇಶಿ, ಸಾವಯವ ಆಹಾರ ಕುರಿತು ಆಹಾರ ಆರೋಗ್ಯ ತಜ್ಞ ಶ್ರೀಶೈಲ ಬಾದಾಮಿ ಉಪನ್ಯಾಸ ನೀಡಿದರು.
    ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಕಾರ್ಯದರ್ಶಿ ಧನಂಜಯ್, ಪುಟ್ಟಸ್ವಾಮಿ, ನೇರ‌್ಲಿಗೆ ಪ್ರಕಾಶ್, ನಾಗಭೂಷಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts