More

    ವಿಶ್ವವೇ ರಾಮಮಂದಿರದತ್ತ ನೋಡಲಿದೆ

    ಚಿತ್ರದುರ್ಗ: ಆಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮಮಂದಿರ ಲೋಕಾರ್ಪಣೆ ಆಗುತ್ತಿದ್ದು, ಇಡೀ ವಿಶ್ವವೇ ಭಾರತದತ್ತ ನೋಡಲಿದೆ. ಇದರ ನಿರ್ಮಾಣಕ್ಕೆ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ಬದಲಿಗೆ ಕೋಟ್ಯಾಂತರ ರಾಮಭಕ್ತರು ನೀಡಿದ ದೇಣಿಗೆಯಿಂದ ಭವ್ಯ ಮಂದಿರ ತಲೆ ಎತ್ತಿ ನಿಂತಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

    ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನಿಂದ ಮೆದೇಹಳ್ಳಿ ರಸ್ತೆಯಲ್ಲಿ ಇರುವ ಅಯ್ಯಪ್ಪಸ್ವಾಮಿಯ 24ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಅಂದು ನಗರದ ಎಲ್ಲ ದೇಗುಲಗಳಲ್ಲೇ ವಿಶೇಷ ಪೂಜೆಯೊಂದಿಗೆ ಸತ್ಕಾರ್ಯದಲ್ಲಿ ಪಾಲ್ಗೊಂಡು ರಾಮನ ಆಶೀರ್ವಾದ ಪಡೆಯೋಣ. ಅದೇ ರೀತಿ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಕೂಡ ಮಾಲಾಧಾರಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಸತತ 24 ವರ್ಷಗಳಿಂದಲೂ ನೆರವೇರಿಸುತ್ತ ಬಂದಿರುವುದು ಸಂತಸದ ವಿಚಾರ. ಧರ್ಮ ಮಾರ್ಗದಲ್ಲಿ ಮುನ್ನಡೆಯಲು ದೀಪೋತ್ಸವ ಕಾರ್ಯಕ್ರಮವೂ ಸಹಕಾರಿಯಾಗಿದೆ ಎಂದು ತಿಳಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಇಡೀ ದೇಶದಲ್ಲೇ ಬರಗಾಲ ಆವರಿಸಿದೆ. ಜನ ಸಂಕಷ್ಟದಲ್ಲಿದ್ದಾರೆ. ಅಯ್ಯಪ್ಪಸ್ವಾಮಿಯ ಲಕ್ಷ ದೀಪೋತ್ಸವ ಕತ್ತಲೆಯಿಂದ ನಾಡಿನ ಜನರನ್ನು ಬೆಳಕಿನತ್ತ ಕೊಂಡೊಯ್ಯಲಿ. ಮುಂಬರುವ ದಿನಗಳಲ್ಲಿ ಸಮೃದ್ಧ ಮಳೆ-ಬೆಳೆಯಾಗಿ ಆರ್ಥಿಕ ಸಬಲತೆ ಸಾಧಿಸಲಿ. ಸಂಕ್ರಾಂತಿ ಹಬ್ಬ ಸರ್ವರಿಗೂ ಶುಭವನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.

    ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್, ದೇಗುಲದ ಪ್ರಧಾನ ಅರ್ಚಕ ಸತೀಶ್ ಶರ್ಮಾ, ಉದ್ಯಮಿ ಎ.ಆರ್.ತಿಪ್ಪೇಸ್ವಾಮಿ, ದಿ ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಟಿ.ಮಹಂತೇಶ್, ದ್ಯಾಮಣ್ಣ, ಐಶ್ವರ್ಯ ಗ್ರೂಪ್ ಆಫ್ ಹೋಟೆಲ್ಸ್‌ನ ಅರುಣ್‌ಕುಮಾರ್, ಮೆದೇಹಳ್ಳಿ ಗ್ರಾಪಂ ಅಧ್ಯಕ್ಷ ಜಯರಾಮರೆಡ್ಡಿ, ಮಾಜಿ ಅಧ್ಯಕ್ಷ ಉಜ್ಜಿನಿಸ್ವಾಮಿ, ರಾಜ್ಯ ಕ್ರೀಡಾಭಿವೃದ್ಧಿ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಜಿ.ಎಂ.ಸುರೇಶ್, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಲಿಂಗಂ ಇ. ಶ್ರೀನಿವಾಸ್‌ಬಾಬು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts