More

    ವಿಶ್ವದ ದೊಡ್ಡಣ್ಣನಾಗಲಿದೆ ಭಾರತ

    ನರಗುಂದ: ಕರೊನಾ ಸಂಕಷ್ಟ ಕಾಲದಲ್ಲೂ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಸಮರ್ಥ ಸ್ವಾವಲಂಬಿ, ಸದೃಢ, ಸಶಕ್ತ ದೇಶವನ್ನಾಗಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಭವಿಷ್ಯದ ದಿನಗಳಲ್ಲಿ ಭಾರತ ವಿಶ್ವದ ದೊಡ್ಡಣ್ಣನಾಗಿ ಹೊರಹೊಮ್ಮಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಪಟ್ಟಣದ ಮಾರುತಿ ನಗರ ಬಡಾವಣೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಮಾಡಿದ ವಿವಿಧ ಸಾಧನೆಗಳ ಮಾಹಿತಿಯುಳ್ಳ ಕರಪತ್ರಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಬಿಜೆಪಿ ಸರ್ಕಾರ ತ್ರಿವಳಿ ತಲಾಖ್, ಆರ್ಟಿಕಲ್ 370 ರದ್ದತಿ, ಪೌರತ್ವ ತಿದ್ದುಪಡಿ ವಿಧೇಯಕ, ರಾಮಮಂದಿರ ನಿರ್ವಣ, ಆಯುಷ್ಮಾನ್ ಭಾರತ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ಅಟಲ್ ಪೆನ್ಶನ್ ಸೇರಿ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಅದರಂತೆ ರಾಜ್ಯ ಸರ್ಕಾರವು ಕರೊನಾ ನಿಯಂತ್ರಣಕ್ಕಾಗಿ ರಾಜ್ಯದ 537 ಆಸ್ಪತ್ರೆಗಳನ್ನು ಐಸೋಲೇಷನ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿದೆ. ನೋಂದಾಯಿತ ಕಟ್ಟಡ ಕಾರ್ವಿುಕರಿಗೆ ತಲಾ 5 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಸಹಾಯಧನ, ರೈತರಿಗೆ 30 ಸಾವಿರ ಕೋಟಿ ರೂ. ಸಾಲ, ಬೆಳೆ ಸಾಲದ ಕಂತು ಪಾವತಿಗೆ 3 ತಿಂಗಳು ವಿನಾಯಿತಿ ಮತ್ತಿತರ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ ಎಂದರು.

    ನರಗುಂದ ಮಂಡಳ ಅಧ್ಯಕ್ಷ ಜಿ.ಎಸ್. ಅದೆಪ್ಪನವರ, ಪುರಸಭೆ ಸದಸ್ಯರಾದ ರಾಚನಗೌಡ ಪಾಟೀಲ, ಪ್ರಕಾಶ ಹಾದಿಮನಿ ಮಾತನಾಡಿದರು.

    ಎಂ.ಎಸ್. ಪಾಟೀಲ, ವಾಸು ಜೋಗಣ್ಣವರ, ಮಂಜು ಮೆಣಸಗಿ, ಯಲ್ಲಪ್ಪ ಸಾಬಳೆ, ಮಾರುತಿ ಅರ್ಭಣದ, ಸಿದ್ದಪ್ಪ ಯಲಿಗಾರ, ಬಸು ಪಾಟೀಲ, ರಿಯಾಜ್ ಕೊಣ್ಣೂರ, ರಾಚನಗೌಡ ಪಾಟೀಲ, ರಾಮಣ್ಣ ಕಳ್ಳಿಗುಡ್ಡ, ಚಂದ್ರಗೌಡ ಪಾಟೀಲ, ದೇವಣ್ಣ ಕಲಾಲ, ಇತರರಿದ್ದರು.

    ನನ್ನಿಂದಾದ ಸಹಾಯ ಮಾಡುವೆ……

    ನನ್ನ ಪತಿ ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾಗಿ ಲಕ್ಷಾಂತರ ರೂ. ಸಾಲ ಮಾಡಿ ಮೃತಪಟ್ಟಿದ್ದಾನೆ. ಈಗ ವಾಸಿಸಲು ನಮಗೆ ಮನೆ ಇಲ್ಲ. ನಮ್ಮ ಕುಟುಂಬಕ್ಕೆ ಸಹಾಯ ಮಾಡಿ ಎಂದು ಇಲ್ಲಿನ ಮಾರುತಿ ನಗರ ಬಡಾವಣೆಯ ಇಂದ್ರಾ ಕಲಾಲ ಸಚಿವರೆದುರು ಕಣ್ಣೀರಿಟ್ಟರು. ಸಚಿವ ಸಿ.ಸಿ. ಪಾಟೀಲ ಪ್ರತಿಕ್ರಿಯಿಸಿ, ಒಂದು ವಾರ ಬಿಟ್ಟು ನನ್ನನ್ನು ಭೇಟಿಯಾಗಿ. ಸರ್ಕಾರ ಹಾಗೂ ನನ್ನಿಂದ ಏನೆಲ್ಲ ಸಹಾಯ ಮಾಡಲು ಸಾಧ್ಯವಿದೆಯೋ ಅದನ್ನು ಖಂಡಿತವಾಗಿಯೂ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts