More

    ವಿಶ್ವದ ಆರೋಗ್ಯಕ್ಕೆ ಮಣ್ಣೇ ಮೂಲ

    ಗೋಕರ್ಣ: ಸಮಾಜ ಮತ್ತು ಸಮಸ್ತ ವಿಶ್ವದ ಆರೋಗ್ಯಕ್ಕೆ ಮಣ್ಣೇ ಮೂಲ. ಮೊದಲು ನಾವು ನಮ್ಮ ನೆಲವನ್ನು, ನೆಲದ ಮಣ್ಣನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಮನುಕುಲದ ಉಳಿವು ನಾವು ಕಾಪಿಡುವ ಮಣ್ಣಿನ ಸ್ವಸ್ಥ್ಯದಲ್ಲಿ ಅಡಗಿದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
    ವಿಷ್ಣುಗುಪ್ತ ವಿಶ್ವವಿದಾಪೀಠದಲ್ಲಿ ವಿದ್ಯಾರ್ಥಿಗಳಿಗಾಗಿ ಸಾಯಿಲ್ ವಾಸು ತಂಡದವರಿಂದ ಆಯೋಜಿಸಲಾಗಿದ್ದ ‘ನಮ್ಮ ಮಣ್ಣು ಹೇಗಿದೆ?’ ವಿಶೇಷ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
    ಮಕ್ಕಳಿಗೆ ಬಾಲ್ಯದಲ್ಲಿಯೇ ಮಣ್ಣಿನ ಪ್ರಾಮುಖ್ಯ ತಿಳಿಸುವ ಕೆಲಸವಾಗಬೇಕು. ಇಂದು ನಗರವಾಸಿ ಮಕ್ಕಳಲ್ಲಿ ಮಣ್ಣು ಎಂದರೆ ಕೊಳಕು, ಮಣ್ಣೆಂದರೆ ಕೆಸರು ಎಂಬ ಭಾವವನ್ನು ಬಿತ್ತಲಾಗಿದೆ. ಮಣ್ಣು ಪೂಜನೀಯ. ಮಣ್ಣಿನ ಮಕ್ಕಳು ಚಿನ್ನದ ಮಕ್ಕಳು ಎಂಬ ಪ್ರಜ್ಞೆಯನ್ನು ಅವರಲ್ಲಿ ನಿರಂತರ ತುಂಬುವ ಕಾರ್ಯ ನಡೆಯಬೇಕು. ಇದರ ಜತೆಗೆ ಯುವಕರಲ್ಲಿ ಮಣ್ಣಿನ ಸಾರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಶ್ರೀಗಳು ಹೇಳಿದರು. ಇದೇ ವೇಳೆ ವಿವಿಧ ಬಣ್ಣದ ಮಣ್ಣಿನಿಂದ ಚಿತ್ರ ಬಿಡಿಸಿದ ವಿದ್ಯಾರ್ಥಿಗಳ ಬಗ್ಗೆ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಮೆಚ್ಚುಗೆ ವ್ಯಕಶ್ರಪಡಿಸಿ ಆಶೀರ್ವದಿಸಿದರು.
    ಸಾಯಿಲ್ ವಾಸು ತಂಡದ ಪ್ರಭಾಕರ ಮತ್ತು ಶಿವಮೂರ್ತಿ ಮಣ್ಣಿನ ಸಂರಕ್ಷಣೆ ಮತ್ತು ಫಲವತ್ತತೆಯಲ್ಲಿ ಸಾವಯವ ಗೊಬ್ಬರದ ಮಹತ್ವ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
    ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಲಾಕಾರ ರಾಧಕೃಷ್ಣ ಬಂದಗದ್ದೆ ಮಾತನಾಡಿ ಶ್ರೀಕೃಷ್ಣ ಮಣ್ಣನ್ನು ತಿಂದ ಕತೆಯ ಮೂಲಕ ಮಣ್ಣಿನ ಅನುಗ್ರಹ ಪಡೆಯುವ ದಾರಿಯನ್ನು ವಿವರಿಸಿದರು. ಶ್ರೀಮಠದ ಸಂಶೋಧನಾ ಖಂಡದ ಸಂಯೋಜಕ ಗುರುರಾಜ ಪಡೀಲ್, ಗುರುಕುಲ ನಿರ್ದೇಶಕ ಶ್ರೀಪಾದ ಭಟ್ಟ, ಪ್ರಾಚಾರ್ಯ ನೃಸಿಂಹ ಭಟ್ಟ,ಮುಖ್ಯಾಧ್ಯಾಪಕಿ ಸೌಭಾಗ್ಯ ಭಟ್ಟ, ಗುರುಕುಲ ಸಮನ್ವಯಾಧಿಕಾರಿ ಅಶ್ವಿನಿ ಉಪಸ್ಥಿತರಿದ್ದರು. ಶಿಕ್ಷಕಿ ಛಾಯಾ ಹೆಗಡೆ, ತೇಜಸ್ವಿನಿ ಮತ್ತು ಮಾನಸಾ ಉಪಾಧ್ಯಾಯ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts