More

    ವಿಶ್ವಕ್ಕೆ ಮಾದರಿ ಸಂಸ್ಕೃತಿ ನಮ್ಮದು

    ರೋಣ: ಕಾಲ ಮತ್ತು ಒತ್ತಡಗಳಿಗೆ ಮಣಿದು ಸುಧಾರಣೆ ಪರವಾದ ಹಲವು ಮನಸ್ಸುಗಳು ಒಂದೆಡೆ ಸೇರಿ ಪರಸ್ಪರ ವಿಚಾರ-ವಿನಿಮಯದ ಮೂಲಕ ತಮ್ಮ ಉದ್ದೇಶಗಳ ಈಡೇರಿಕೆಗಾಗಿ ಹೋರಾಟ ಮಾಡುವುದೇ ಚಳವಳಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಸದಸ್ಯೆ, ಸಾಹಿತಿ ಮಂಜುಳಾ ರೇವಡಿ ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ ರೋಣ ತಾಲೂಕು ಘಟಕದಿಂದ ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಾರದ ಸಾಹಿತ್ಯ ಚಿಂತನ’ ಕಾರ್ಯಕ್ರಮದಲ್ಲಿ ‘ಕರ್ನಾಟಕ ಇತಿಹಾಸದಲ್ಲಿ 12 ಶತಮಾನದ ಧಾರ್ವಿುಕ ಚಳವಳಿಯ ಮಹತ್ವ’ ಕುರಿತು ಅವರು ಮಾತನಾಡಿದರು. ಕನಕದಾಸರು, ಅಂಬೇಡ್ಕರ್, ಬಸವಣ್ಣನವರು, ಶಂಕರಾಚಾರ್ಯರಂತಹ ಸಮಾಜ ಸುಧಾರಕರನ್ನು ನಿರ್ದಿಷ್ಟ ಕೋಮುಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಇಂತಹ ತಪ್ಪುಗಳನ್ನು ಹೋಗಲಾಡಿಸಿ ಅವರು ನೀಡಿರುವ ತತ್ತ್ವಳನ್ನು ಸಮಾಜದ ಏಳಿಗೆಗೆ ಬಳಸಬೇಕಿದೆ ಎಂದರು.

    ಸಾಮಾಜಿಕ ಪರಿವರ್ತನೆ ಇಂದು ಅತ್ಯಗತ್ಯವಾಗಿದೆ. ಜಾತಿಯ ಹೆಸರಿನಲ್ಲಿ ಸಮಾಜವನ್ನು ಛಿದ್ರಗೊಳಿಸಲಾಗುತ್ತಿದೆ. ಭಾರತೀಯ ಸಮಾಜ ವಿಶ್ವಕ್ಕೆ ಮಾದರಿಯಾಗುವ ತತ್ತ್ವ ಸಂಸ್ಕೃತಿ ಹೊಂದಿದೆ ಎಂದರು.

    ಉಪನ್ಯಾಸಕಿ ಮಂಜುಳಾ ಕುಲಕರ್ಣಿ, ಶಿಕ್ಷಕಿ ಬಿ.ಎನ್. ಖ್ಯಾತನಗೌಡ್ರ, ಅನಸೂಯಾ ಕುರಿ, ಇತರರು ಉಪಸ್ಥಿತರಿದ್ದರು, ಎಸ್.ಎಸ್. ಸ್ಥಾವರಮಠ, ಪಿ.ಆರ್. ಹಿರೇಮಠ, ಎಂ.ವಿ. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts