More

    ವಿಶ್ವಕ್ಕೆ ಕಾಯಕ ಸಿದ್ಧಾಂತ ಪರಿಚಯಿಸಿದ ಬಸವಣ್ಣ


    ಕರಿಮುದ್ದನಹಳ್ಳಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಮಹದೇವ ಹೇಳಿಕೆ

    ಹುಣಸೂರು: ಜಗಜ್ಯೋತಿ ಬಸವಣ್ಣ ಇಡೀ ವಿಶ್ವಕ್ಕೆ ಕಾಯಕ ಸಿದ್ಧಾಂತವನ್ನು ಪರಿಚಯಿಸಿದ ಮಹಾನ್ ದಾರ್ಶನಿಕರು ಎಂದು ಕರಿಮುದ್ದನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಆರ್.ಮಹದೇವ್ ತಿಳಿಸಿದರು.

    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹುಣಸೂರು ಘಟಕ ಮತ್ತು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಶರಣರ ವೈಚಾರಿಕತೆ ವಿದ್ಯಾರ್ಥಿಗಳೆಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    12ನೇ ಶತಮಾನದ ಜಟ್ಟುಗಟ್ಟಿದ ಸಮಾಜದ ಕೊಳೆಯನ್ನು ಕ್ರಾಂತಿಕಾರಕ ಚಿಂತನೆ ಮತ್ತು ನಿಲುವುಗಳ ಮೂಲಕ ತೊಳೆದರು. ಬಸವಣ್ಣರ ನೇತೃತ್ವದಲ್ಲಿ ಶರಣರು ವೈಚಾರಿಕತೆ ಬೀಜಗಳನ್ನು ಬಿತ್ತಿ ಕರ್ಮ ಸಿದ್ಧಾಂತವನ್ನು ಬದಿಗೊತ್ತಿ ಕಾಯಕ ಸಿದ್ಧಾಂತವನ್ನು ಪ್ರತಿಪಾದಿಸಿದರು. ವಿಶ್ವಮಾನವ ಪರಿಕಲ್ಪನೆಯನ್ನೂ ಮೂಡಿಸಿದರು ಎಂದರು.

    ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಮಾತನಾಡಿ, ಬಸವೇಶ್ವರರು ರೂಪಿಸಿದ ತ್ರಿವಿಧ ದಾಸೋಹ ಸಿದ್ಧಾಂತಗಳು ಧರ್ಮಾಧರ ಹಿಡಿತದಲ್ಲಿದ್ದ ಸಮಾಜವನ್ನು ಬಿಡುಗಡೆಗೊಳಿಸಿ, ಸಮಾನತೆಯ ತಂಗಾಳಿ ಬೀಸುವಂತೆ ಮಾಡುವಲ್ಲಿ ಯಶಸ್ವಿಯಾದವು ಎಂದರು.

    ಕವಿ ಕುಮಾರ್ ಹೊನ್ನೇನಹಳ್ಳಿ, ಪರಿಷತ್ ಕಾರ್ಯದರ್ಶಿ ರೇಣುಕಾಪ್ರಸಾದ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಕುಮಾರ್, ಪ್ರಾಂಶುಪಾಲ ಕೆ.ಬಿ.ಕಾರ್ತಿಕ್, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts