More

    ವಿಶೇಷ ರೈಲು ವಿಸ್ತರಣೆ

    ಮಂಗಳೂರು: ದಕ್ಷಿಣ, ನೈಋತ್ಯ ಹಾಗೂ ಕೇಂದ್ರೀಯ ರೈಲ್ವೆ ಸಹಯೋಗದೊಂದಿಗೆ ಉತ್ಸವ ವಿಶೇಷ ರೈಲು ಸೇವೆಗಳನ್ನು ನವೆಂಬರ್ ತನಕ ವಿಸ್ತರಣೆ ಮಾಡಿರುವುದಾಗಿ ಕೊಂಕಣ ರೈಲ್ವೆ ತಿಳಿಸಿದೆ.

    ನಂ.06338 ಎರ್ನಾಕುಳಂ ಜಂಕ್ಷನ್-ಓಖಾ ವಾರಕ್ಕೆರಡು ಬಾರಿ ಸಂಚರಿಸುವ ರೈಲು ಜುಲೈ 2ರಿಂದ ಅಕ್ಟೋಬರ್ 31ರ ವರೆಗೆ ಪ್ರತಿ ಬುಧ, ಶುಕ್ರವಾರಗಳಂದು ಎರ್ನಾಕುಳಂನಿಂದ ರಾತ್ರಿ 8.25ಕ್ಕೆ ಹೊರಟು ಪ್ರಯಾಣದ ಮೂರನೇ ದಿನ ಸಂಜೆ 4.40ಕ್ಕೆ ಓಖಾ ತಲುಪಲಿದೆ. ನಂ.06337 ಓಖಾ-ಎರ್ನಾಕುಳಂ ರೈಲು ಜು.5ರಿಂದ ಅ.31ರ ವರೆಗೆ ಪ್ರತಿ ಸೋಮ, ಶನಿವಾರಗಳಂದು ಬೆಳಗ್ಗೆ 6.45ಕ್ಕೆ ಓಖಾದಿಂದ ಹೊರಟು ಪ್ರಯಾಣದ ಮೂರನೇ ದಿನ ಎರ್ನಾಕುಳಂಗೆ ಮುಂಜಾನೆ 2.50ಕ್ಕೆ ತಲುಪಲಿದೆ. ಮುಂಗಾರೇತರ ವೇಳಾಪಟ್ಟಿಯಂತೆ(ನವೆಂಬರ್ 3ರಿಂದ 5ರ ತನಕ) ನಂ.06338 ರೈಲು ಎರ್ನಾಕುಳಂನಿಂದ ಬುಧ, ಶುಕ್ರವಾರಗಳಂದು ರಾತ್ರಿ 8.25ಕ್ಕೆ ಹೊರಟು ಮೂರನೇ ದಿನ ಓಖಾಗೆ ಸಂಜೆ 4.40ಕ್ಕೆ ತಲುಪುವುದು. ನಂ.06337 ಓಖಾ-ಎರ್ನಾಕುಳಂ ರೈಲು ಸೋಮ, ಶನಿವಾರಗಳಂದು(ನ.1ರಿಂದ 8ರ ವರೆಗೆ) ಓಖಾದಿಂದ ಬೆಳಗ್ಗೆ 6.45ಕ್ಕೆ ಹೊರಟು ಮರುದಿನ ರಾತ್ರಿ 11.55ಕ್ಕೆ ಎರ್ನಾಕುಳಂ ತಲುಪುವುದು.

    ನಂ.06072 ತಿರುನಲ್ವೇಲಿ ದಾದರ್ ಸಾಪ್ತಾಹಿಕ ವಿಶೇಷ ರೈಲು (ಜುಲೈ7ರಿಂದ ಅಕ್ಟೋಬರ್ 31ರ ವರೆಗೆ) ಬುಧವಾರ ತಿರುನಲ್ವೇಲಿಯಿಂದ ಬೆಳಗ್ಗೆ 7.15ಕ್ಕೆ ಹೊರಟು ದಾದರ್‌ಗೆ ಮರುದಿನ ಸಂಜೆ 5.05ಕ್ಕೆ ತಲುಪುವುದು. ನಂ. 06071 ದಾದರ್ ತಿರುನಲ್ವೇಲಿ ಸಾಪ್ತಾಹಿಕ ಸೂಪರ್‌ಫಾಸ್ಟ್ ರೈಲು(ಜು.8ರಿಂದ ಅ.31ರ ವರೆಗೆ) ದಾದರ್‌ನಿಂದ ಗುರುವಾರಗಳಂದು ರಾತ್ರಿ 8.40ಕ್ಕೆ ಹೊರಟು ತಿರುನಲ್ವೇಲಿಗೆ ಮೂರನೇ ದಿನ ಬೆಳಗ್ಗೆ 9.30ಕ್ಕೆ ತಲುಪುತ್ತದೆ. ಮುಂಗಾರೇತರ ವೇಳಾಪಟ್ಟಿಯಂತೆ ನಂ.06072 ರೈಲು ನ.3ರಂದು ತಿರುನಲ್ವೇಲಿಯಿಂದ ಬೆಳಗ್ಗೆ 7.15ಕ್ಕೆ ಹೊರಟು ಮರುದಿನ ದಾದರ್‌ಗೆ ಸಂಜೆ 3ಕ್ಕೆ ತಲುಪುವುದು. ನಂ.06071 ರೈಲು ನ.4ರಂದು ಗುರುವಾರ ರಾತ್ರಿ 8.40ಕ್ಕೆ ದಾದರ್‌ನಿಂದ ಹೊರಟು ಮೂರನೇ ದಿನ ತಿರುನಲ್ವೇಲಿಗೆ ಸಂಜೆ 4.10ಕ್ಕೆ ತಲುಪುವುದು.

    ನಂ.02620 ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ರೈಲು(ಜು.1ರಿಂದ ಅ.31ರ ವರೆಗೆ) ಮಂಗಳೂರು ಸೆಂಟ್ರಲ್‌ನಿಂದ 12.40ಕ್ಕೆ ಹೊರಟು ಮರುದಿನ ಬೆಳಗ್ಗೆ 6.35ಕ್ಕೆ ಲೋಕಮಾನ್ಯ ತಿಲಕ್ ತಲುಪುವುದು. ನಂ. 02619 ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ರೈಲು(ಜು.2ರಿಂದ ಅ.31ರ ವರೆಗೆ) ಸಂಜೆ 3.20ಕ್ಕೆ ಹೊರಟು ಮರುದಿನ 10.10ಕ್ಕೆ ಬೆಳಗ್ಗೆ ಮಂಗಳೂರು ತಲುಪುವುದು. ಮುಂಗಾರೇತರ ವೇಳಾಪಟ್ಟಿಯಂತೆ ನಂ.02620(ನ.1ರಿಂದ 7ರ ವರೆಗೆ) ಮಂಗಳೂರಿನಿಂದ ಮಧ್ಯಾಹ್ನ 2.20ಕ್ಕೆ ಹೊರಟು ಮರುದಿನ 6.35ಕ್ಕೆ ಲೋಕಮಾನ್ಯ ತಿಲಕ್ ತಲುಪುತ್ತದೆ. ನಂ.02619 ರೈಲು(ನ.1ರಿಂದ 8ರ ವರೆಗೆ) ಲೋಕಮಾನ್ಯ ತಿಲಕ್‌ನಿಂದ ಸಂಜೆ 3.20ಕ್ಕೆ ಹೊರಟು ಮರುದಿನ ಮಂಗಳೂರಿಗೆ ಬೆಳಗ್ಗೆ 7.40ಕ್ಕೆ ತಲುಪುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts