More

    ವಿಶೇಷ ರೈಲು ಓಡಿಸಲು ಒತ್ತಾಯ


    ಯಾದಗಿರಿ: ನಾಡಹಬ್ಬ ದಸರಾ ಹಾಗೂ ದೀಪಾವಳಿ ಹಬ್ಬದ ನಿಮಿತ್ತ ರಾಯಚೂರು ಯಾದಗಿರಿ ಮಾರ್ಗವಾಗಿ ಕಲಬುರಗಿ ವರೆಗೆ ಎರಡು ವಿಶೇಷ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಟೋಕರಿ, ಕೋಲಿ ಸಮಾಜದಿಂದ ಸೋಮವಾರ ಇಲ್ಲಿನ ಸ್ಟೇಷನ್ ರೈಲ್ವೆ ವ್ಯವಸ್ಥಾಪಕರ ಮೂಲಕ ಗುಂತಕಲ್ನ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

    ಸಾಮಾನ್ಯ ದಿನಗಳಲ್ಲಿ ಇಲ್ಲಿನ ನಿಲ್ದಾಣದಲ್ಲಿ ರೈಲು ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸಲು ಹೋದರೆ, 250-300 ವೇಟಿಂಗ್ ತೋರಿಸುತ್ತಿದೆ. ಇನ್ನೂ ದೊಡ್ಡ ಹಬ್ಬಗಳ ಸಂದರ್ಭದಲ್ಲಂತೂ ಟಿಕೆಟ್ ಸಿಗುವುದೇ ಕಷ್ಟ. ಅದರಲ್ಲೂ ನಾಡಹಬ್ಬ ದಸರಾ ಹಾಗೂ ದೀಪಾವಳಿಗೆ ದೂರದ ಊರುಗಳಿಂದ ತಮ್ಮೂರಿಗೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ರೈಲ್ವೆ ಪ್ರಯಾಮ ಆರಾಮದಾಯಕವಾಗಿದೆ ಎಂದು ಪದಾಧಿಕಾರಿಗಳು ವಿವರಿಸಿದರು.

    ಯಾದಗಿರಿ ನಿಲ್ದಾಣ ನಿತ್ಯ ರೈಲ್ವೆ ಇಲಾಖೆಯ ಗುಂತಕಲ್ ವಿಭಾಗಕ್ಕೆ ಅತಿಹೆಚ್ಚು ಆದಾರ ಕೊಡುತ್ತಿದೆ. ಆದರೆ ಸೌಕರ್ಯ, ರೈಲುಗಳ ಸೇವೆ ಮಾತ್ರ ಅತ್ಯಲ್ಪವಾಗಿವೆ. ಪ್ರಮುಖ ಎಕ್ಸ್ಪ್ರೆಸ್ ರೈಲುಗಳು ನಿಲುಗಡೆ ಮಾಡುವಂತೆ ಅನೇಕ ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ಇನ್ನಾದರೂ ರೈಲ್ವೆ ಸಚಿವರು, ರಾಯಚೂರು ಸಂಸದರು ಮತ್ತು ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts