More

    ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

    ಮುಂಡರಗಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಶುಕ್ರವಾರ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆಶಪ್ಪ ಪೂಜಾರಿಗೆ ಮನವಿ ಸಲ್ಲಿಸಿದರು. ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ನೌಕರಿ ಕಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ್ಝ ನೇರ ವೇತನ ಪಾವತಿ, ಬೋನಸ್ ಹೆಚ್ಚಳ, ಆರೋಗ್ಯ ಭಾಗ್ಯ ಯೋಜನೆ, ವಿಶೇಷ ಸೇವಾ ಭತ್ಯೆ ನೀಡುವುದು, ಎಲ್ಲ ಹುದ್ದೆಗಳಿಗೂ ವೇತನ ಭತ್ಯೆ ನೀಡುವುದು, ಮುಷ್ಕರದ ದಿನಗಳಲ್ಲಿ ಕಡಿತವಾದ ವೇತನ ಪಾವತಿಸಬೇಕು, ನೌಕರರಿಗೆ ಕಲ್ಯಾಣ ನಿಧಿ ಸ್ಥಾಪನೆ ಮಾಡಬೇಕು, ಖಾಲಿ ಇರುವೆಡೆ ವರ್ಗಾವಣೆಗೆ ಅವಕಾಶ ನೀಡಬೇಕು, ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಬಾರದು, ಮಹಿಳೆಯರಿಗೆ ಹೆರಿಗೆ ರಜೆ ನೀಡಬೇಕು. ಎಂಬ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಲಾಯಿತು.

    ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಾ. ಶಂಕರ ಭಾವಿಮನಿ, ಡಾ. ಜಾಹೀಗಿರ ಹಾರೋಗೇರಿ, ಡಾ. ಸುಧಾ ಶಾಸ್ತ್ರೀ, ಡಾ. ವಿದ್ಯಾ ಗದ್ದಿ, ಬೀಬಿಜಾನ ಸುಂಕದ, ಉಮೇಶ ದೇವರಮನಿ, ಚಂದ್ರಾ ಮಾಜಿ, ದಾನೇಶ್ವರಿ ಭಜಂತ್ರಿ, ಹನುಮಾಕ್ಷಿ ಕಗ್ಗಲ್, ಶೋಭಾ ಖಾಕಿ, ಪ್ರೇಮಾ ರೆಡ್ಡಿ, ಸುಭಾಸ ಅಂಗಡಿ, ಮೌಲಾಹುಸೇನ ಡಂಬಳ, ಮಧು ರಗಟಿ, ಅಭಿನಾಶಾ ಅಂಗಡಿ, ಚೈತ್ರಾ ಬಾರಕೇರ, ಶೋಭಾ ಸವಣೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts