More

    ವಿವಿಧ ಬಗೆಯ ಮೂರು ಲಕ್ಷ ಸಸಿ ಸಿದ್ಧ

    ರೋಣ: ತಾಲೂಕಿನ ಹಸಿರೀಕರಣಕ್ಕೆ ಸಿದ್ಧತೆ ನಡೆಸಿರುವ ಅರಣ್ಯ ಇಲಾಖೆ ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿತರಣೆ ಮಾಡಲು ವಿವಿಧ ಬಗೆಯ 3 ಲಕ್ಷ ಸಸಿಗಳನ್ನು ಬೆಳೆಸಿದೆ. ಎಂಟತ್ತು ದಿನಗಳಿಂದ ತಾಲೂಕಿನಾದ್ಯಂತ ಮಳೆಯಾಗುತ್ತಿದೆ. ಏರುತ್ತಿದ್ದ ತಾಪಮಾನದಿಂದ ಬಿಸಿಯಾಗಿದ್ದ ಭೂಮಿ ಇದೀಗ ತಂಪಾಗುತ್ತಿದೆ. ಹಾಗಾಗಿ, ಸಸಿಗಳ ವಿತರಿಸಲು ಅರಣ್ಯ ಇಲಾಖೆ ಭರದ ಸಿದ್ಧತೆ ಕೈಗೊಂಡಿದೆ.

    ಪ್ರಾದೇಶಿಕ ಅರಣ್ಯ ವಿಭಾಗದಿಂದ 1 ಲಕ್ಷ, ಸಾಮಾಜಿಕ ಅರಣ್ಯ ವಿಭಾಗದಿಂದ 2 ಲಕ್ಷ ಸಸಿಗಳನ್ನು ತಾಲೂಕಿನ ನೆಲ್ಲೂರ ನರ್ಸರಿಯಲ್ಲಿ ಪೋಷಿಸಲಾಗುತ್ತಿದೆ. ವಿವಿಧೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿದೆ. ಮೇ ತಿಂಗಳ ಅಂತ್ಯಕ್ಕೆ ಸಸಿಗಳ ನಾಟಿ ಮತ್ತು ವಿತರಣೆಗೆ ಇಲಾಖೆಗಳು ಸಿದ್ಧತೆ ಆರಂಭಿಸಿವೆ. ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಎಲ್ಲ ಹಂತದ ಸಿಬ್ಬಂದಿ, ಅಧಿಕಾರಿಗಳು ಸಸಿಗಳ ಪೋಷಣೆಗೆ ವೇಳಾಪಟ್ಟಿ ತಯಾರಿಸಿ ಸರದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

    ತಾಲೂಕಿನ ನೆಲ್ಲೂರ ಗ್ರಾಮದ ನರ್ಸರಿಯಲ್ಲಿ 14500 ಸಾಗವಾನಿ, 20433 ನುಗ್ಗೆ, 13381 ಮಾಗಣಿ, 12875 ಪೇರಲ, 10834 ಕರಿಬೇವು, 50338 ಹೆಬ್ಬೇವು, 10,000 ಲಿಂಬೆ, 20,000 ಬೇವು, 5000 ನೇರಳೆ, 7900 ಹುಣಸೆ, 20,000 ಹೊಂಗೆ, ಹೊಸದಾಸವಾಳ 10,000, ಸಿರಸಲ 5000, ತಪಸಿ 6000, ಬಾದಾಮಿ 3000 ಸಸಿ ಒಳಗೊಂಡು ಒಟ್ಟು 3 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಕಾಶ ಪವಾಡಿಗೌಡ್ರ ಹಾಗೂ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಅನ್ವರ್ ಕೋಲಕಾರ ಹೇಳಿದರು.

    ನೆಲ್ಲೂರ ನರ್ಸರಿಯಲ್ಲಿ ಪೋಷಿಸಲಾಗಿರುವ ಸಸಿಗಳನ್ನು ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿತರಣೆ ಮಾಡಿ ಉಳಿದ ಸಸಿಗಳನ್ನು ಅರಣ್ಯ ಭೂಮಿಯ ಖಾಲಿ ಪ್ರದೇಶದಲ್ಲಿ ನೆಡುವ ಉದ್ದೇಶವಿದೆ.
    | ಅನ್ವರ್ ಕೋಲಕಾರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts