More

    ವಿವಿಧ ಊರುಗಳಿಗೆ ರಸ್ತೆ ಸಂಪರ್ಕ ಕಡಿತ

    ರಗುಂದ: ಸೋಮವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಪಟ್ಟಣದ ದಂಡಾಪುರ ಬೆಳವಟಗಿಯವರ ಪ್ಲಾಟ್​ನಲ್ಲಿರುವ 5, ಕೃಷ್ಣಾನಗರ ಜನತಾ ಪ್ಲಾಟ್​ನ 10, ತಾಲೂಕಿನ ಕುರ್ಲಗೇರಿ ಬೆಣ್ಣೆಹಳ್ಳದ ಪಕ್ಕದ 20, ಸುರಕೋಡದ 10, ಕೊಣ್ಣೂರಿನ ಹಳ್ಳಿಕೇರಿಅಗಸಿ (ಎಸ್ಸಿ ಕಾಲನಿಯ) 15, ಭೈರನಹಟ್ಟಿ ಹಳೇ ಜನತಾ ಪ್ಲಾಟ್ ತಗ್ಗು ಪ್ರದೇಶದಲ್ಲಿರುವ 10ಕ್ಕೂ ಅಧಿಕ ಮನೆಗಗೆ ನೀರು ನುಗ್ಗಿದೆ. ಬಟ್ಟೆ, ಆಹಾರ ಸಾಮಗ್ರಿ, ವಿವಿಧ ಪೀಠೋಪಕರಣ, ಮಕ್ಕಳ ಪಠ್ಯಪುಸ್ತಕಗಳು ಹಾನಿಯಾಗಿವೆ. ನೀರನ್ನು ಹೊರಹಾಕಲು ಜನರá- ರಾತ್ರಿಯಿಡೀ ಹರಸಾಹಸ ಪಡುವಂತಾಯಿತು.
    ಪಟ್ಟಣದ ಬೆಣ್ಣೆಪೇಟೆ ಬಡಾವಣೆಯ ಅನಸವ್ವ ಶೇಖಪ್ಪ ಜೋಳದ ಎಂಬುವರ ಮನೆ ಮುಂಭಾಗದ ಛಾವಣಿ ಮತ್ತು ಹಿಂದಿನ ಗೋಡೆಗಳು ಕುಸಿದಿವೆ. ಮಳೆಗೆ ತಾಲೂಕಿನ ಕುರ್ಲಗೇರಿ, ಸುರಕೋಡ, ಯಾವಗಲ್, ಕಲಹಾಳ- ಲಖಮಾಪೂರ ಮಧ್ಯದ ಬೆಣ್ಣೆಹಳ್ಳ ತುಂಬಿ ಹರಿದಿದೆ. ಕಣಕೀಕೊಪ್ಪ- ಗುರ್ಲಕಟ್ಟಿ ಮಾರ್ಗಮಧ್ಯದಲ್ಲಿ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದರಿಂದ ನರಗುಂದ- ರೋಣ, ನರಗುಂದ- ಗದಗ, ಕೊಣ್ಣೂರ- ಹೊಳೆಆಲೂರ, ಕೊಣ್ಣೂರ- ಸುರೇಬಾನ ಮತ್ತು ರಾಮದುರ್ಗ ಮಾರ್ಗವಾಗಿ ಸಂಚರಿಸುವ ಎಲ್ಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದವು.
    ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಬಳಿಯ ಗಂಗರಿ ಹಳ್ಳದ ಪ್ರವಾಹಕ್ಕೆ ನಾರಾಯಣ ಬಾಲರಡ್ಡಿ ಎಂಬುವರಿಗೆ ಸೇರಿದ 5 ಎಕರೆ ಕಬ್ಬಿನ ಬೆಳೆ ಹಾಳಾಗಿದೆ. ಕೊಣ್ಣೂರಿನ ಬಸ್ ನಿಲ್ದಾಣ, ಪೊಲೀಸ್ ಠಾಣೆ ಆವರಣ ಸಂಪೂರ್ಣ ಜಲಾವೃತಗೊಂಡು, ಕೆರೆಯಂತಾಗಿದೆ. ಗ್ರಾಮದ ಹುಬ್ಬಳ್ಳಿ- ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಮಧ್ಯದ ರಸ್ತೆ ಗುಂಡಿಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದರಿಂದ ಕೆಲವರು ನಿಂತ ನೀರಲ್ಲಿಯೇ ಬೈಕ್, ಟ್ರ್ಯಾಕ್ಟರ್​ಗಳನ್ನು ತೊಳೆದು ತಾಲೂಕಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ವೈಶಾಲಿ, ತಹಸೀಲ್ದಾರ್ ಎ.ಡಿ. ಅಮರಾವದಗಿ ಅವರೊಂದಿಗೆ ಕೊಣ್ಣೂರಿನ ಎಸ್ಸಿ ಕಾಲನಿ, ಕಪ್ಪಲಿ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಮಳೆಹಾನಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts