More

    ವಿರೋಧ ಪಕ್ಷಗಳಿಂದ ಕಪಿಚೇಷ್ಟೆ

    ಕೋಲಾರ: ಪ್ರಧಾನಿ ನರೇಂದ್ರ ಮೋದಿ ರೈತರ ಪರ ಜಾರಿಗೆ ತರುತ್ತಿರುವ ಯೋಜನೆಗಳನ್ನು ಸಹಿಸಿಕೊಳ್ಳದ ವಿರೋಧ ಪಕ್ಷದವರು ಮತ್ತು ದಲ್ಲಾಳಿಗಳು ಹರಾಶರಾಗಿ ಮೋದಿಯನ್ನು ರೈತ ವಿರೋಧಿಯನ್ನಾಗಿ ಬಿಂಬಿಸಲು ಷಡ್ಯಂತರ ನಡೆಸುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.

    ಕಾಂಗ್ರೆಸ್ ಆಡಳಿತಾವಧಿಯಲ್ಲಿ ರೈತರ ಅನುಕೂಲಕ್ಕಾಗಿ ಒಂದೇ ಒಂದು ಒಳ್ಳೆಯ ಕಾರ್ಯಕ್ರಮ ಜಾರಿಗೆ ತರಲಿಲ್ಲ, ವಿರೋಧ ಪಕ್ಷಗಳು ಪಂಜಾಬ್‌ನಲ್ಲಿರುವ ರೈತ ವಿರೋಧಿ ದಲ್ಲಾಳಿಗಳ ಕುಮ್ಮಕ್ಕಿನಿಂದ ಕೃಷಿ ಸುಧಾರಣೆಗೆ ಸಂಬಂಧಿಸಿದ ಮಸೂದೆ ವಿರುದ್ಧ ಪ್ರತಿಭಟನೆ ಮಾಡಿ ಜನ ಸಾವಾನ್ಯರಿಗೆ ತೊಂದರೆ ವಾಡುತ್ತಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸಲು ಕೃಷಿ ಸುಧಾರಣೆಗಾಗಿ ಪರಿಣಾಮಕಾರಿ ಕಾರ್ಯಕ್ರಮ ಒಳಗೊಂಡ ಮಸೂದೆ ಜಾರಿಗೆ ತಂದಿದೆ, ಮಸೂದೆ ಜಾರಿಗೆ ಮುನ್ನ 2018-19ರ ಸಂಸತ್ತಿನ ಕೃಷಿ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಿ ಸಮಿತಿ ನೀಡಿದ ಸಲಹೆ ಆಧಾರದ ಮೇಲೆ ಮಸೂದೆ ಅನುಷ್ಠಾನಕ್ಕೆ ತರಲಾಗಿದೆ ಎಂದರು.

    2014ರಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಕೃಷಿ ಸುಧಾರಣೆಗೆ ಮಸೂದೆ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಇವರಿಂದ ಆಗದ ಕೆಲಸವನ್ನು ಬಿಜೆಪಿ ವಾಡಿರುವುದರಿಂದ ಸಹಿಸಿಕೊಳ್ಳಲಾಗದೆ ಪಂಜಾಬ್, ಕೇರಳ ಇನ್ನಿತರ ರಾಜ್ಯಗಳ ರೈತರನ್ನು ಬಳಿಸಿಕೊಂಡು ಅನಗತ್ಯ ಪ್ರತಿಭಟನೆ ನಡೆಸುತ್ತಿವೆ, ರೈತರಿಗೆ ವಿರೋಧ ಪಕ್ಷಗಳ ಉದ್ದೇಶ ಅರ್ಥವಾಗಿರುವುದರಿಂದ ಭಾರತ್ ಬಂದ್‌ಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಎಂದರು.

    ಎಪಿಎಂಸಿಗೆ ಜಾಗ: ಕೋಲಾರ ಎಪಿಎಂಸಿಗೆ ಬೇಕಾದ ಜಮೀನು ಒದಗಿಸಲು ಪ್ರಾವಾಣಿಕ ಪ್ರಯತ್ನ ನಡೆಸುತ್ತಿರುವೆ, ಚಲ್ಲುವನಹಳ್ಳಿಯಲ್ಲಿ ಗುರುತಿಸಿದ್ದ ಜಾಗವನ್ನು ಮುಳುಗಡೆ ಪ್ರದೇಶವೆಂಬ ಕಾರಣಕ್ಕೆ ಕೈಬಿಡಲಾಗಿದೆ, ಕೋರಗಂಡಹಳ್ಳಿಯಲ್ಲಿ ಸರ್ಕಾರದ 90 ಎಕರೆ ಜಾಗವಿದ್ದು, ಇದರಲ್ಲಿ 50 ಎಕರೆಯನ್ನು ಕೋಲಾರ ಎಪಿಎಂಸಿಗೆ ಕೊಡಿಸಲು ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್‌ಸಿ ಇಂಚರ ಗೋವಿಂದರಾಜು ಹಾಗೂ ನಾನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಶೀಘ್ರ ಜಮೀನು ಮಂಜೂರಾಗಲಿದೆ ಎಂದರು.

    ಕೆಜಿಎಫ್‌ನಲ್ಲಿ ಚಿನ್ನದ ಗಣಿ ಮರು ಸ್ಥಾಪನೆ, ಹೊಸ ಕೈಗಾರಿಕೆ ಸ್ಥಾಪನೆ, ಶ್ರೀನಿವಾಸಪುರದಲ್ಲಿ ರೈಲ್ವೆ ವರ್ಕ್‌ಶಾಪ್ ನಿರ್ವಾಣಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ವಾಡಲಾಗಿದೆ. ನನ್ನ ಅವಧಿಯಲ್ಲಿ ಜನರಿಗೆ ನೀಡಿರುವ ಭರವಸೆ ಈಡೇರಿಸಿ ಮುಂದಿನ ಚುನಾವಣೆಗೆ ಮತಯಾಚಿಸುವೆ ಎಂದರು.

    ಗ್ರಾಪಂ ಚುನಾವಣೆಗೆ ಸಕಲ ಸಿದ್ಧತೆ ವಾಡಿಕೊಳ್ಳಲಾಗುತ್ತಿದೆ, ಚುನಾವಣೆ ಮುಗಿಯುವವರೆಗೆ ಕ್ಷೇತ್ರದಲ್ಲೇ ಇರುತ್ತೇನೆ, ಅವಿರೋಧ ಆಯ್ಕೆ ಪ್ರಶ್ನೆಯೇ ಇಲ್ಲ, ನಮ್ಮ ಅಭ್ಯರ್ಥಿಗಳನ್ನು ಎಲ್ಲ ಕಡೆ ಕಣಕ್ಕಿಳಿಸಲಾಗುವುದು ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ, ನಗರ ಟಕ ಅಧ್ಯಕ್ಷ ತಿಮ್ಮರಾಯಪ್ಪ, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ಜಿಲ್ಲಾ ವಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts