More

    ವಿರಾಗಿ ಕುಮಾರೇಶ್ವರ ಅದ್ದೂರಿ ರಥಯಾತ್ರೆ

    ನಿಪ್ಪಾಣಿ: ಲಿಂ. ಹಾನಗಲ್​ ಕುಮಾರ ಶಿವಯೋಗಿಗಳ ಜೀವನಾಧಾರಿತ ಧ್ವನಿಸುರುಳಿ ಬಿಡುಗಡೆ ಹಾಗೂ ವಿರಾಗಿ ಕುಮಾರೇಶ್ವರ ರಥಯಾತ್ರೆ ಶುಕ್ರವಾರ ಅದ್ದೂರಿಯಾಗಿ ಜರುಗಿತು.
    ಇಲ್ಲಿನ ಗುರುದೇವ ಸೇವಾ ಸಂಸ್ಥೆ, ವೀರಶೆವ ಲಿಂಗಾಯತ ಸಮಾಜ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​ ವತಿಯಿಂದ ಹಮ್ಮಿಕೊಂಡಿದ್ದ ರಥಯಾತ್ರೆಯ ಜರುಗಿದ ಮಾರ್ಗದ ಇಕ್ಕೇಲಗಳಲ್ಲಿ ನಿಂತಿದ್ದ ಭಕ್ತಾದಿಗಳು ರಥಕ್ಕೆ ಪುಷ್ಪ ಸಮರ್ಪಿಸಿದರು.

    ಶ್ರೀರಾಮ ಮಂದಿರದಿಂದ ಆರಂಭಗೊಂಡ ರಥಯಾತ್ರೆ ಹಳೆಯ ಪುಣೆ&ಬೆಂಗಳೂರು ರಸ್ತೆ ಮಾರ್ಗವಾಗಿ ನಗರಸಭೆ, ಅಶೋಕ ನಗರ, ಕಿತ್ತೂರು ರಾಣಿ ಚನ್ನಮ್ಮ ವತ್ತ, ಕೋಠಿವಾಲೆ ಕಾರ್ನರ್​ ಮಾರ್ಗವಾಗಿ ಮಹಾದೇವ ಮಂದಿರಕ್ಕೆ ಕೊನೆಗೊಂಡಿತು. ಮಹಾದೇವ ಮಂದಿರದಲ್ಲಿ ಮಹಾಪ್ರಸಾದ ಜರುಗಿತು. ರಥಯಾತ್ರೆಗೆ ಸಚಿವೆ ಶಶಿಕಲಾ ಜೊಲ್ಲೆ, ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಖಡಕಲಾಟದ ಕುಮಾರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಸರ್ವಭೂಷಣ ಸ್ವಾಮೀಜಿ, ಆಡಿ ಹಂದಿಗುಂದದ ಶಿವಾನಂದ ಸ್ವಾಮೀಜಿ, ಆಡಿಯ ಸಿದ್ಧೇಶ್ವರ ವಿರಕ್ತಮಠದ ಸಿದ್ಧೇಶ್ವರ ಸ್ವಾಮೀಜಿ, ಗುಹೇಶ ಅಂಟಿನ್​ ಚಾಲನೆ ನೀಡಿದರು. ಮಹಾತ್ಮ ಬಸವೇಶ್ವರ ಕ್ರೆಡಿಟ್​ ಸೌಹಾರ್ದ ಸಹಕಾರಿ ಸಂಸ್ಥಾಪಕ ಡಾ. ಚಂದ್ರಕಾಂತ ಕುರಬೆಟ್ಟಿ, ಚೇರ್ಮನ್​ ಡಾ. ಎಸ್​.ಆರ್​.ಪಾಟೀಲ, ಕಿಶೋರ ಬಾಳಿ, ವಿಎಸ್​ಎಂ ಹಿರಿಯ ನಿರ್ದೇಶಕ ಚಂದ್ರಕಾಂತ ತಾರಳೆ, ಸಂಜಯ ಮೊಳವಾಡೆ, ವಿನಾಯಕ ಢೋಲೆ, ಕೆ.ಎಲ್​.ಇ ಸಂಸ್ಥೆಯ ನಿರ್ದೇಶಕ ಪ್ರವಿಣ ಬಾಗೇವಾಡಿ, ನಗರಸಭೆ ಮಾಜಿ ಉಪಾಧ್ಯ ಸುನೀಲ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts