More

    ವಿಮೆ ಕಂತು ಪಾವತಿಸಲು ಸೂಚನೆ

    ಕೊಪ್ಪಳ: ತೋಟಗಾರಿಕೆ ಬೆಳೆಗಳ ವಿಮಾ ವಂತಿಕೆ ಜು.31ರೊಳಗೆ ಪಾವತಿಸುವಂತೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

    ಅಧಿಸೂಚನೆ ಅನ್ವಯ ಪಪ್ಪಾಯ, ಮಾವು, ದ್ರಾಕ್ಷಿ, ದಾಳಿಂಬೆ, ಮತ್ತು ಹಸಿಮೆಣಸಿನಕಾಯಿ ಬೆಳೆಗಳನ್ನು ವಿಮೆಗೆ ಒಳಪಡಿಸಬಹುದು. ರೈತರು ತಮ್ಮ ಪಾಲಿನ ವಿಮಾ ವಂತಿಕೆ ಜು.31ರೊಳಗೆ ಪಾವತಿಸಿದಲ್ಲಿ ಯೋಜನೆಯಡಿ ಪ್ರಾಯೋಜನೆ ಪಡೆಯಬಹುದು. ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 14,000ರೂ., ಮಾವು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 4,000ರೂ., ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 6350ರೂ., ಹಸಿ ಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 3,550ರೂ., ಪಪ್ಪಾಯ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 6,700 ರೂ. ಪಾವತಿಸಬೇಕು. ಬೆಳೆಸಾಲ ಪಡೆದ, ಪಡೆಯದ ರೈತರು ರಾಷ್ಟ್ರೀಕೃತ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರದಲ್ಲಿ ಪಾವತಿಸಬಹುದು. ಮಾಹಿತಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts