More

    ವಿಮೆ ಕಂತು ಪಾವತಿಗೆ 31 ಕೊನೆ

    ಬೆಳಗಾವಿ: ಮುಂಗಾರು ಹಂಗಾಮಿಗೆ 2023&24ನೇ ಸಾಲಿಗೆ ತಾಲೂಕಿನ ರೈತರಿಗೆ ಕರ್ನಾಟಕ ರೈತ ಸುರಾ ಪ್ರಧಾನಮಂತ್ರಿ ಫಸಲ್​ ಬಿಮಾ (ವಿಮಾ) ಯೋಜನೆಯಡಿ ತಾಲೂಕಿನ ಕಾಕತಿ, ಉಚಗಾಂವ ಮತ್ತು ಬೆಳಗಾವಿ ಹೋಬಳಿಗಳಿಗೆ ಆಲೂಗಡ್ಡೆ ಮಳೆಯಾಶ್ರಿತ ಮತ್ತು ಕೇವಲ ಕಾಕತಿ ಹೋಬಳಿಗೆ ಟೊಮ್ಯಾಟೊ ಬೆಳೆಗೆ ವಿಮೆ ಅಧಿಸೂಚನೆಯಾಗಿದೆ.

    ಆಲೂಗಡ್ಡೆ ಮಳೆಯಾಶ್ರಿತ ಪ್ರತಿ ಹೆಕ್ಟೇರ್​ ಬೆಳೆಗೆ 1,445 ರೂ. ಟೊಮ್ಯಾಟೊ ಬೆಳೆಗೆ 4,457 ರೂ. ರೈತರ ವಂತಿಕೆಯ ವಿಮಾ ಕಂತು ನಿಗದಿಯಾಗಿದೆ. ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಬೆಳಗಾವಿ ತಾಲೂಕಿಗೆ ಮಾವು ಬೆಳೆ ಅಧಿಸೂಚನೆಗೊಂಡಿದೆ. ಮಾವು ಬೆಳೆಗೆ ಪ್ರತಿ ಹೆಕ್ಟೇರ್​ಗೆ 4,000 ರೂ. ರೈತರ ವಂತಿಕೆಯ ವಿಮಾ ಕಂತು ನಿಗದಿಯಾಗಿದೆ. ಜು.31ರೊಳಗೆ ವಿಮೆ ಕಂತು ಪಾವತಿಸಲು ಹತ್ತಿರದ ಬ್ಯಾಂಕ್​ ಶಾಖೆಗಳನ್ನು ಸಂಪರ್ಕಿಸಬಹುದು. ಮಾಹಿತಿಗೆ ಬೆಳಗಾವಿ ತಾಲೂಕಿನ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts