More

    ವಿನ ಗುಲಾಮರಾಗಿ ಬದುಕಿ

    ಶಿವಾನಂದ, ಭಾರತಿ, ಸ್ವಾಮೀಜಿ, ಆಶೀರ್ವಚನ, ಸತ್ಸಂಗ, ಸಮ್ಮೇಳನ,ಬೆಳಗಾವಿ, Shivananda, Bharati, Swamiji, Ashirvachana, Satsang, Sammelana, Belagavi,

    ಬೆಟಗೇರಿ, ಬೆಳಗಾವಿ: ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನ ತೊಲಗಿಸಿ ಸುಜ್ಞಾನವನ್ನು ನೀಡುವ ಶಕ್ತಿ ಗುರುವಿನಲ್ಲಿದೆ. ಗುರುವಿನ ಕೃಪೆಗೆ ಪಾತ್ರರಾಗಬೇಕು ಎಂದು ಇಂಚಲ ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
    ಗ್ರಾಮದ ಗಜಾನನ ವೇದಿಕೆಯಿಂದ ಈಚೆಗೆ ಹಮ್ಮಿಕೊಂಡಿದ್ದ 38ನೇ ಸತ್ಸಂಗ ಸಮ್ಮೇಳನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೊಡಿಸುವ ಸದ್ಗುರುವಿನ ಜ್ಞಾನಾಮೃತವನ್ನು ಪಡೆಯಲು ಶಿಷ್ಯರಾದವರು ಶ್ರಮಿಸಬೇಕು ಎಂದರು.
    ಹಳಕಟ್ಟಿಯ ನಿಜಗುಣ ದೇವರು, ಮಲ್ಲಾಪುರದ ಚಿದಾನಂದ ಸ್ವಾಮೀಜಿ, ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ.ನೀಲಮ್ಮತಾಯಿ ಅಸುಂಡಿ, ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮೀಜಿ, ಹಡಗಿನಾಳದ ಮಲ್ಲೇಶ ಮತ್ತು ಮುತ್ತೇಶ ಶರಣರು, ಶಿವಶರಣೆ ಮೈತ್ರಾದೇವಿ ಅವರಿಂದ “ಗುರುವರನೊಲವಿಲ್ಲದ ವನೇನನೋದಲು ದೊರೆಯಲರಿಯದು ಸಮ್ಯಜ್ಞಾನ’ ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
    ಮಹಾಂತೇಶ ಕಲ್ಲೋಳಿ ತಬಲಾ ಸಾಥ್​ದೊಂದಿಗೆ ಶೇಗುಣಶಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ ಜರುಗಿತು.
    ಶರಣರಾದ ಪುಂಡಲೀಕಪ್ಪ ಪಾರ್ವತೇರ, ಬಸಪ್ಪ ದೇಯಣ್ಣವರ, ಬಸವರಾಜ ಪಣದಿ, ಈಶ್ವರ ಬಳಿಗಾರ, ಚಿಂತಪ್ಪ ಸಿದ್ನಾಳ, ಮಹಾದೇವಪ್ಪ ಹಡಪದ, ಬಸಪ್ಪ ತೋಟಗಿ, ನಿಂಗಪ್ಪ ಕಂಬಿ, ಶ್ರೀಧರ ದೇಯನ್ನವರ, ರಾಮಣ್ಣ ಮುಧೋಳ, ಬಸನಗೌಡ ದೇಯನ್ನವರ, ಗೌಡಪ್ಪ ಮೆಳೆನ್ನವರ, ಬಸವರಾಜ ನೀಲನ್ನವರ, ಈರಪ್ಪ ದೇಯಣ್ಣವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts