More

    ವಿಧಾನಸಭೆ ಚುನಾವಣೆಗೆ ಬಿಜೆಪಿ ರೆಡಿ; ಕಾರ್ಯಕರ್ತರನ್ನು ತೊಡಗಿಸಲು ಬೂತ್ ವಿಜಯ್ ಅಭಿಯಾನ: ಟಿ.ಡಿ.ಮೇಘರಾಜ್

    ಸಾಗರ: ಬಿಜೆಪಿ ಸರ್ವಸ್ಪರ್ಶಿ ಆಡಳಿತ ನೀಡುತ್ತಿದ್ದು, ವಿಧಾನಸಭೆ ಚುನಾವಣೆ ಎದುರಿಸಲು ಸನ್ನದ್ಧವಾಗಿದೆ. ಬೂತ್ ವಿಜಯ್ ಅಭಿಯಾನ ಮೂಲಕ ಪಕ್ಷದ ಕಾರ್ಯಕರ್ತರನ್ನು ಸಂಘಟಿತವಾಗಿ ತೊಡಗಿಸುವ ಯೋಜನೆ ರೂಪಿಸಿದೆ ಎಂದು ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
    ಸಾಗರದ 61ನೇ ಬೂತ್‌ನಲ್ಲಿ ಶನಿವಾರ ಬಿಜೆಪಿ ನಗರ ಮಂಡಲದಿಂದ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಜ. 21ರಿಂದ 29ರವರೆಗೆ ರಾಜ್ಯಾದ್ಯಂತ ಬೂತ್ ವಿಜಯ್ ಅಭಿಯಾನ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪಕ್ಷ ಸದೃಢಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
    ಜಿಲ್ಲೆಯಲ್ಲೂ ಬಿಜೆಪಿಯೊಂದಿಗೆ ಎಲ್ಲ ಮೋರ್ಚಾಗಳು ಅಭಿಯಾನ ಯಶಸ್ಸಿಗೆ ಕಾರ್ಯಯೋಜನೆ ರೂಪಿಸಿ ಚಾಲನೆ ನೀಡಿವೆ. ಸಂಸದರು, ಶಾಸಕರ ಅಭಿವೃದ್ದಿ ಕೆಲಸಗಳ ಕರಪತ್ರ ವಿತರಣೆ, ಮಿಸ್ಡ್‌ಕಾಲ್ ನೀಡುವ ಮೂಲಕ ಹೊಸ ಸದಸ್ಯರ ಸೇರ್ಪಡೆ, ಸಾಮೂಹಿಕವಾಗಿ ಮನ್ ಕಿ ಬಾತ್ ವೀಕ್ಷಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಜನರಿಗೆ ತಲುಪಿಸುವುದು ಮತ್ತು ಫಲಾನುಭವಿಗಳ ಜೊತೆ ಚರ್ಚೆ ಸೇರಿದಂತೆ ಪ್ರಮುಖ ಐದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನನ್ನು ಈಗಾಗಲೇ ನಿಜವಾದ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಫಲಾನುಭವಿಗಳನ್ನೊಳಗೊಂಡಂತೆ ಎಲ್ಲ ಕಡೆಗಳಲ್ಲೂ ೂ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಬೂತ್ ವಿಜಯ್ ನಂತರ ವಿಜಯ ಸಂಕಲ್ಪ ಕಾರ್ಯವನ್ನು ನಡೆಸಿ ಚುನಾವಣೆ ಎದುರಿಸಲು ನಮ್ಮ ಪಡೆ ಸಜ್ಜುಗೊಳಿಸಲಾಗುತ್ತಿದೆ ಎಂದರು.
    ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಬೂತ್ ವಿಜಯ ಸಂಕಲ್ಪ ಅಭಿಯಾನ ಕಾರ್ಯಕರ್ತರಿಗೆ ಶಕ್ತಿ ತುಂಬಿದೆ. ಕೇಂದ್ರ, ರಾಜ್ಯ, ಶಾಸಕರು, ನಗರಸಭೆ ಆಡಳಿತ ನೀಡಿದ ಯೋಜನೆ ಕುರಿತು ಮತದಾರರೊಂದಿಗೆ ಅಭಿಯಾನದಲ್ಲಿ ಚರ್ಚೆ ನಡೆಸಲು ಸೂಚನೆ ನೀಡಲಾಗಿದೆ. ಬಿಜೆಪಿ ಸದೃಢಗೊಳಿಸುವಲ್ಲಿ ಈ ಅಭಿಯಾನ ಪ್ರಮುಖಪಾತ್ರ ವಹಿಸುತ್ತದೆ , ಪಕ್ಷದ ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಬೇಕು ಎಂದರು.
    ಅಧ್ಯಕ್ಷತೆ ವಹಿಸಿದ್ದ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸುವ ಮಹತ್ತರ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಗರದ 49 ಬೂತ್‌ಗಳಲ್ಲೂ ಏಕಕಾಲಕ್ಕೆ ಅಭಿಯಾನಕ್ಕೆ ಜಿಲ್ಲಾಧ್ಯಕ್ಷರು ಚಾಲನೆ ನೀಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಅತ್ಯಂತ ಸಮರ್ಥವಾದ ಜನಪರ ಆಡಳಿತ ನೀಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ, ಸರ್ಕಾರದ ಜನಮುಖಿ ಯೋಜನೆಗಳ ಬಗ್ಗೆ ಚಿಂತನ ಮಂಥನ ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts