More

    ವಿದ್ವಾಂಸನಿಗೆ ಜಾನಪದ `ತಜ್ಞ’ ಪ್ರಶಸ್ತಿ..!

    ಬಾಗಲಕೋಟೆ: ತಾಯಿ ಜಾನಪದ ಹಾಡು, ತಂದೆಯ ಬಯಲಾಟ ಕಲೆ ಬದುಕು. ಕುಟುಂಬದ ಕೃಷಿ ಕಾಯಕ ಕಾರಣಕ್ಕೆ ಜಾನಪದ ತೊಟ್ಟಿಲಿನಲ್ಲಿ ನಾನು ಬೆಳೆದೆ. ಅದನ್ನು ಕಲಿತು, ಅರಿತುಕೊಳ್ಳುವ ಪ್ರಶ್ನೆ ಬರಲಿಲ್ಲ. ರಕ್ತಗತವಾಗಿ ಅವಿತುಕೊಂಡಿತ್ತು. ವೃತ್ತಿ ಬದುಕಿನ ಜೊತೆಗೆ ಜಾನಪದ ಸೇವೆ ಮೈಗೂಡಿಸಿಕೊಂಡೆ. ಇದೀಗ ಪ್ರಶಸ್ತಿಯಿಂದ ನನ್ನ ಸೇವೆಗೆ ಸಂತೃಪ್ತಿ ತಂದಿದೆ..!!
    ಜಿಲ್ಲೆಯ ಇಳಕಲ್ಲಿನ ನಿವಾಸಿ, ವಿಜಯಮಹಾಂತೇಶ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ, ಜಾನಪದ ಹಾಡುಗಾರ ಡಾ.ಶಂಭು ವೀರಭದ್ರಪ್ಪ ಬಳಿಗಾರ ಅವರ ಮಾತುಗಳಿವು. ಕರ್ನಾಟಕ ಜಾನಪದ ಅಕಾಡೆಮಿಯ 2022 ಸಾಲಿನ ಜಾನಪದ ತಜ್ಞ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಳಿಗಾರ ಅವರ ಕುಟುಂಬ ವರ್ಗ, ಅಪಾರ ಶಿಷ್ಯ ಬಳಗದಲ್ಲಿ ಸಂಭ್ರಮ ಮನೆ ಮಾಡಿದೆ.
    ಡಾ.ಶಂಭು ಬಳಿಗಾರ ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದವರು. 1973 ರಲ್ಲಿ ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಬಿಎ ಪದವಿ, 1975 ರಲ್ಲಿ ಕವಿವಿಯಲ್ಲಿ ಎಂಎ ಹಾಗೂ 1989 ರಲ್ಲಿ ಹೈದರಾಬಾದ ಓಸ್ಮಾನಿಯ ವಿವಿಯಲ್ಲಿ ಎಂಪಿಎಲ್ ಪದವಿ ಪಡೆದುಕೊಂಡಿದ್ದಾರೆ. ಜೋಳದ ರಾಶಿ ದೊಡ್ಡನಗೌಡರ ಸಮಗ್ರ ಅಧ್ಯಯನಕ್ಕೆ ಕಲಬುರ್ಗಿ
    ಜಿಲ್ಲೆಯ ಗುಲಬರ್ಗಾ ವಿವಿ ಪಿಎಚ್ ಡಿ
    ಪದವಿ ಪ್ರದಾನ ಮಾಡಿದೆ. 1975 ರಿಂದ ಇಳಕಲ್ಲಿನ ವಿಜಯ ಮಹಾಂತೇಶ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಆರಂಭಿಸಿದ ಡಾ.ಶಂಬು ಬಳಿಗಾರ ಅವರು 2011 ರಿಂದ 2012 ವರೆಗೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸದ್ಯ ಇಳಕಲ್ಲಿನಲ್ಲಿ ವಾಸವಾಗಿದ್ದಾರೆ.
    ಪ್ರಶಸ್ತಿ-ಧ್ವನಿ ಸುರುಳಿ:
    ಹೂವಾ ತಂದವರು, ಬಿಚ್ಚಿ ಬಿದ್ದಾವ ಬಿಳಿಜೋಳ, ಜೋಳದ ರಾಶಿ ದೊಡ್ಡನಗೌಡರು, ಎಸ್.ಆರ್.ಕಂಠಿಯವರು, ಹುನಗುಂದ ತಾಲೂಕಾ ದರ್ಶನ, ಗುರುಕಿರಣ, ನಡುಕನ್ನಡ ಕಾವ್ಯ ಸಂಚಯ, ಜನಪದ ಸಾಹಿತ್ಯ ಹಾಗೂ ಬೈಲಾಟಗಳ ಸಂಗ್ರಹ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ನುಚ್ಚಿನ ಮಲ್ಲಯ್ಯ, ಹಾಲುಂಡ ತವರು, ಕೆರೆಗೆ ಹಾರ, ತೊಗರಿ ತಿಪ್ಪ, ಗೋದಿ ಹುಗ್ಗಿ ಗಂಗಯ್ಯ, ಪತಿವೃತಾ ನೀಲಮ್ಮ, ಸೋಮರಾಯ ಭೀಮರಾಯ, ಮದುವೆ ಹಾಡುಗಳು, ಮಹಾಂತ ಜೋಳಿಗೆ ಸೇರಿದಂತೆ ವಿವಿಧ ಧ್ವನಿ ಸುರುಳಿಗಳು ಜನಮಾನಸದಲ್ಲಿ ಇಂದಿಗೂ ಪ್ರಸಿದ್ಧಿ ಪಡೆದಿವೆ.

    ಸುಮಧುರವಾಗಿ ಹಾಡಬಲ್ಲರು ಇವರು. ಬ್ರಹತ್ ಸಮೂಹವನ್ನು ಮಂತ್ರಮುಗ್ದಗೊಳಿಸುವ ಮಾತಿನ ಶೈಲಿ ನಿಜಕ್ಕೂ ಆಕರ್ಷನೀಯ. ದೇಶ, ವಿದೇಶದಲ್ಲಿ ಉಪನ್ಯಾಸ, ಭಾಷಣ, ಹಾಡುಗಳ ಮೂಲಕ ಜನಪದ ಸೇವೆ ಸಲ್ಲಿಸಿದ್ದಾರೆ. ತೊಗರಿ ತಿಪ್ಪ ಧ್ವನಿ ಸುರುಳಿ ಅಂದರೇ ಸಾಕು ಜನ ಡಾ.ಶಂಭು ಬಳಿಗಾರ ಎನ್ನುತ್ತಾರೆ ಅಷ್ಟೊಂದು ಪ್ರಸಿದ್ಧಿ ಪಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts