More

    ವಿದ್ರೋಹಿಗಳನ್ನು ಬಂಧಿಸದಿದ್ದರೆ ಹೋರಾಟ

    ಕಲಬುರಗಿ: ಸಾತ್ ಗುಮ್ಮಜ್ ಪ್ರದೇಶದ ಮನೆಯೊಂದರ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದು ಬರೆದ ವಿದ್ರೋಹಿಗಳನ್ನು 6ರೊಳಗೆ ಬಂಧಿಸದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಮಾಜಿ ಸಚಿವರಾದ ಬಿಜೆಪಿ ಹಿರಿಯ ನಾಯಕ ಮಾಲೀಕಯ್ಯ ಗುತ್ತೇದಾರ್ ಎಚ್ಚರಿಸಿದ್ದಾರೆ.
    ಇಂಥಹ ಕೃತ್ಯಗಳ ಹಿಂದೆ ಪೊಲೀಸ್ ವೈಫಲ್ಯ ಸ್ಪಷ್ಟವಾಗಿ ಎದ್ದು ಕಾಣುತ್ತಿದ್ದು, ನಗರ ಪೊಲೀಸ್ ಆಯುಕ್ತರು ವೈಫಲ್ಯವನ್ನು ಹೊರಬೇಕು. ಪೊಲೀಸರ ನಿರ್ಲಕ್ಷೃದ ಬಗ್ಗೆ ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ತರುವೆ. ಪ್ರಧಾನಿ ಬಗ್ಗೆ ಅವಹೇಳನಕಾರಿ ಮತ್ತು ದೇಶದ್ರೋಹ ಹೇಳಿಕೆಗಳನ್ನು ಬರೆಯುತ್ತಿದ್ದರೆ ಪೊಲೀಸರು ಏನು ಮಾಡುತ್ತಿದ್ದರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
    ಕಲಬುರಗಿ ಸೌಹಾರ್ದದ ನಾಡು. ಎಲ್ಲರೂ ಭಾವೈಕ್ಯದಿಂದ ಬದುಕುತ್ತಿದ್ದಾರೆ. ಕೆಲ ದುಷ್ಟಶಕ್ತಿಗಳು ಶಾಂತಿ ಕದಡಲು ಇಂತಹ ಕೆಲಸ ಮಾಡುತ್ತಿರಬಹುದು. ನಗರ ಪೊಲೀಸ್ ಆಯುಕ್ತಾಲಯ ಅಸ್ತಿತ್ವಕ್ಕೆ ಬಂದ ನಂತರ ಅಪರಾಧಗಳು ಕಡಿಮೆ ಆಗಬೇಕು. ಆದರೆ ಹೆಚ್ಚಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಆಯುಕ್ತರ ವಿರುದ್ಧ ಕ್ರಮ ಇಲ್ಲವೇ ಕಡ್ಡಾಯ ರಜೆ ಮೇಲೆ ಕಳುಹಿಸುವಂತೆ ಸಿಎಂ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.
    ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ, ಮುಖಂಡರಾದ ಮಂಜು ರಡ್ಡಿ, ಅಂಬಾರಾಯ ಅಷ್ಟಗಿ, ಸಿದ್ರಾಮಯ್ಯ ಹಿರೇಮಠ ಇತರರಿದ್ದರು.
    ಸಂವಿಧಾನ ಚರ್ಚೆ ಮಾದರಿ ಹೆಜ್ಜೆ
    ಸಂವಿಧಾನ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಲು ಮುಖ್ಯಮಂತ್ರಿ ಮುಂದಾಗಿರುವುದು ಮಾದರಿ ಕ್ರಮ. ಎಲ್ಲ ಸದಸ್ಯರಿಗೆ ಸಂವಿಧಾನ ಪ್ರತಿ ನೀಡುವ ಮೂಲಕ ಬಿಜೆಪಿ ಇಟ್ಟಿರುವ ನಂಬಿಕೆ ತೋರಿಸಿದ್ದಾರೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು. ಕಾಂಗ್ರೆಸ್ನವರು ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡಿ ಒಣಪ್ರೀತಿ ತೋರಿಸುತ್ತಿದ್ದಾರೆ. ಆದರೆ ಯಡಿಯೂರಪ್ಪ ಸದನದಲ್ಲಿ ಚಚರ್ಿಸುವಂಥ ಹೆಜ್ಜೆ ಇಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದಾರೆ ಎಂದು ತಿಳಿಸಿದರು.


    ಸ್ವಾತಂತ್ರೃ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಅಪಾರ ಗೌರವವಿದೆ. ಅವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು ಸರಿಯಲ್ಲ. ದೊರೆಸ್ವಾಮಿ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಯತ್ನಾಳ್ ಹಾಗೆ ಹೇಳಿರಬಹುದು. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ವಿವಾದ ಮುಗಿಸುವುದು ಒಳ್ಳೆಯದು.
    | ಮಾಲೀಕಯ್ಯ ಗುತ್ತೇದಾರ್ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts