More

    ವಿದ್ಯುತ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

    ಚಿತ್ರದುರ್ಗ:ಪೂರ್ವಾಪರ ಯೋಚಿಸದೇ ವಿದ್ಯುತ್ ದರ ಏರಿಸಿರುವ ರಾಜ್ಯಸರ್ಕಾರದ ಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಖಂಡಿಸಿದರು.ನಗರ ಕಾಂಗ್ರೆಸ್ ಕಚೇರಿ ಬಳಿ ಸೋಮವಾರ ವಿದ್ಯುತ್ ದರ ಏರಿಕೆ ವಿರುದ್ಧ ಪಕ್ಷದ ಕಾರ‌್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ,ಕರೊನಾ ಸಂಕಷ್ಟದ ಸಂದರ್ಭದಲ್ಲಿ ಜನರು ಜೀವನ ನಡೆಸುವುದೇ ದುಸ್ತರವಾಗಿದ್ದು,ಸರ್ಕಾರ ಈ ಕೂಡಲೇ ದರ ಏರಿಕೆ ಹಿಂಪಡೆಯ ಬೇಕೆಂದು ಆಗ್ರಹಿಸಿದರು.
    ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ,ಸಿದ್ದರಾಮಯ್ಯ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸಿ ನಾನಾ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಗೊಳಿಸಿತ್ತು. ಆದರೆ ಈಗ ಕೇಂದ್ರ,ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಒಂದಲ್ಲ, ಒಂದು ರೀತಿಯ ಮಾರಕ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿವೆ ಎಂದು ಅ ಸಮಾಧಾನ ವ್ಯಕ್ತಪಡಿಸಿದರು.

    ದರ ಏರಿಕೆ ಹಿಂಪಡೆಯದಿದ್ದರೆ ಪಕ್ಷದ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಸಿದರು. ಪ್ರತಿಭಟನೆ ಬಳಿಕ ಕಾರ‌್ಯಕರ್ತರು ಎಡಿಸಿ ಸಿ.ಸಂಗಪ್ಪಗೆ ಮನವಿ ಸಲ್ಲಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಿ.ಕೆ.ಮೀನಾಕ್ಷಿ,ಮೋಕ್ಷರುದ್ರಸ್ವಾಮಿ,ಎಂ.ಅಜ್ಜಣ್ಣ,ಡಿ.ಎನ್.ಮೈಲಾರಪ್ಪ,ಕೆ.ಪಿ.ಸಂಪತ್‌ಕುಮಾರ್, ಚಾಂದ್‌ಪೀರ್,ಶಬ್ಬಿರ್‌ಭಾಷ,ಎನ್.ತಿಪ್ಪೇಸ್ವಾಮಿ,ಸೈಯದ್ ಅಲ್ಲಾಭಕ್ಷಿ,ಆರ್.ಪ್ರಕಾಶ್,ಬಿ.ಟಿ.ಜಗದೀಶ್,ಒ.ಶಂಕರ್,ಎಚ್.ಅಂಜಿನಪ್ಪ, ಎನ್.ಡಿ.ಕುಮಾರ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts