More

    ವಿದ್ಯುತ್ ಖಾಸಗೀಕರಣ ವಿರೋಧಿಸಿ ಧರಣಿ

    ಅಣ್ಣಿಗೇರಿ: ವಿದ್ಯುತ್ ವಿತರಣೆ ಕಂಪನಿಗಳ ಖಾಸಗೀಕರಣ ವಿರೋಧಿಸಿ ಕವಿಪ್ರನಿ ನೌಕರರ ಸಂಘ, ಸಂಘ-ಸಂಸ್ಥೆಗಳ ಒಕ್ಕೂಟಗಳು, ಕೆಪಿಟಿಸಿಎಲ್ ನೌಕರರ ಪ್ರಾಥಮಿಕ ಸಮಿತಿ, ಕೆಇಬಿ ಸಿಬ್ಬಂದಿ ಪಟ್ಟಣದ ಕೆಇಬಿ ಕಚೇರಿ ಮುಂದೆ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

    2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣ ಕೇಂದ್ರ ಸರ್ಕಾರದ ಕಾರ್ವಿುಕ ವಿರೋಧಿ ನೀತಿಯಾಗಿದೆ ಎಂದು ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಶಹರ ಶಾಖಾಧಿಕಾರಿ ಸಂಧ್ಯಾರಾಣಿ, ಗ್ರಾಮೀಣ ಶಾಖಾಧಿಕಾರಿ ವೈ.ಎಚ್. ಮದಕಟ್ಟಿ, ನವಲಗುಂದ/ಅಣ್ಣಿಗೇರಿ ಕೆಪಿಟಿಸಿಎಲ್ ನೌಕರರ ಪ್ರಾಥಮಿಕ ಸಮಿತಿ ಅಧ್ಯಕ್ಷ ಎನ್.ಎನ್. ಮುಗದ, ಸದಸ್ಯರಾದ ವಿ.ಎಸ್. ಬಂಗಾರಿಮಠ, ಶಿವಪ್ಪ ಕಬನೂರ, ಜಿ.ಎಂ. ಶಿರಗುಪ್ಪಿ, ಮಂಜುನಾಥ ನಿಂಬನಾಯಕರ, ಕೆ.ಡಿ. ಅಕ್ಕಿ, ನೀತಾ ಜಾಧವ, ಭಾರತಿ ಮಾಢಳ್ಳಿ, ರಿಜ್ವಾನ್ ಹುಲ್ಲೂರ, ಜೈಲಾನಿ ಸೌದಾಗರ, ಶರೀಫ್ ಸಬ್ಜೇಖಾನವರ, ಅರುಣ ನಾಡಗೇರ, ಆರ್.ಆರ್. ಕುಲಕರ್ಣಿ, ಪ್ರಕಾಶ ಗುದ್ದನಗೌಡ್ರ, ಶಿವು ಕುಕನೂರ, ಅಶೋಕ ಯರಗುಪ್ಪಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts