More

    ವಿದ್ಯಾರ್ಥಿ ವೇತನ ಕೂಡಲೆ ಬಿಡುಗಡೆಯಾಗಲಿ

    ಬೆಳಗಾವಿ: ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ ಹಾಗೂ ಬಾಕಿ ಇರುವ ಎಲ್ಲ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ವಕೀಲ ಎನ್.ಆರ್.ಲಾತೂರ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟಿಸಿದ ಪ್ರತಿಭಟನಾಕಾರರು, ಕಾರ್ಮಿಕರ ಮಕ್ಕಳಿಗೆ ನೀಡುತ್ತಿರುವ ಸ್ಕೂಲ್ ಕಿಟ್ ಹಾಗೂ ನ್ಯೂಟ್ರಿಷನ್ ಕಿಟ್‌ಗಳ ಬದಲಾಗಿ, ಅಷ್ಟು ಮೊತ್ತವನ್ನು ಕಾರ್ಮಿಕರ ಖಾತೆಗೆ ಜಮೆ ಮಾಡಬೇಕು. ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಮನೆ ಕಟ್ಟಲು 5 ಲಕ್ಷ ರೂ. ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

    ಬೆಳಗಾವಿ ಜಿಲ್ಲೆಯಲ್ಲಿ 2 ಲಕ್ಷ ಕಾರ್ಮಿಕರಿದ್ದು, ಅವರಿಗೆ ವಿತರಿಸುವ ಗೌಂಡಿ ಕಿಟ್, ಸೆಂಟ್ರಿಂಗ್ ಕಿಟ್ ಹಾಗೂ ಟ್ಯಾಬ್‌ಗಳ ಮಾಹಿತಿ ಮತ್ತು ಫಲನಾಭವಿಗಳನ್ನು ಆಯ್ಕೆ ಮಾಡುವ ವಿಧಾನವನ್ನು ಸಕಾಲಕ್ಕೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬೇಕು. ಕಾರ್ಮಿಕರ ಮಕ್ಕಳ ವಿವಾಹಕ್ಕಾಗಿ ನೀಡುತ್ತಿರುವ ವಿವಾಹ ಸಹಾಯಧನವನ್ನು ಕಳೆದ ಎರಡು ವರ್ಷಗಳಿಂದ ಯಾರಿಗೂ ವಿತರಿಸಿಲ್ಲ, ಕೂಡಲೇವಿತರಿಸಬೇಕು. ಕಟ್ಟಡ ಕಾರ್ಮಿಕರಿಗೆ ರೆಯುವ ಪಿಂಚಣಿಯೋಜನೆ ನಿಯಮಗಳನ್ನು ಸರಳೀಕರಿಸಿ 60 ವರ್ಷದ ಎಲ್ಲ ಕಟ್ಟಡ ಕಾರ್ಮಿಕರಿಗೂ ಪಿಂಚಣಿ ಸುಲಭವಾಗಿ ದೊರೆಯುವಂತೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ಶಿವಾಜಿ ಕಾಗಣಿಕರ, ಶ್ರೀದೇವಿ ತಮ್ಮನ್ನವರ, ಗಣೇಶ ತೊರಳಿ, ನಂದಾ ಪಾಟೀಲ, ನೂತನ ಚೌಗಲೆ, ಪಿ.ಪಿ.ದಾಯಗೊಂಡೆ ಹಾಗೂ ಶೀತಲ ಬಿಜವಾನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts