More

    ವಿದ್ಯಾರ್ಥಿ ವೇತನ ಅವ್ಯವಹಾರ ತನಿಖೆಗೆ ಆಗ್ರಹ

    ಬೆಳಗಾವಿ: ವಿದ್ಯಾರ್ಥಿ ವೇತನದಲ್ಲಿ ಅವ್ಯವಹಾರ ತನಿಖೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)
    ಕಾರ್ಯಕರ್ತರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    2021-22ನೇ ಶೈಕ್ಷಣಿಕ ಸಾಲಿನ ವರ್ಷದಲ್ಲಿ ಬಾಕಿ ಉಳಿದಿರುವ ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡಬೇಕು. ತಂತ್ರಾಂಶದಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆಯಾಗಿರುವುದಾಗಿ ನಮೂದಿಸಲಾಗಿದೆ. ಆದರೆ, ಬಹುತೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆತಿಲ್ಲ. ವಿದ್ಯಾರ್ಥಿ ವೇತನದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಜತೆಗೆ ಅವ್ಯವಹಾರ ಹಣವನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಎಲ್ಲಾ ವಿಶ್ವವಿದ್ಯಾಲಯಗಳು ಯುಯುಸಿಎಂಎಸ್ ತಂತ್ರಾಂಶ ಬಳಸಿ, ದಾಖಲಾತಿ ಹಾಗೂ ಫಲಿತಾಂಶ ಸೇರಿ ಎಲ್ಲ ಮಾಹಿತಿಯನ್ನು ನಮೂದಿಸಲಾಗುತ್ತಿದೆ. ಆದರೆ, ತಂತ್ರಾಂಶದಲ್ಲಿರುವ ಕೆಲವು ತಾಂತ್ರಿಕ ಸಮಸ್ಯೆಗಳಿಂದ ವಸತಿ ನಿಲಯಗಳಿಗೆ ಅರ್ಜಿ, ಬೇರೆ ಕಾಲೇಜಿಗೆ ವರ್ಗಾವಣೆ, ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿದೆ. ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮೂಲಕ ಕಾರ್ಯಕರ್ತರು ಒತ್ತಾಯಿಸಿದರು.
    ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೋಹಿತ ಉಮನಾವಾದಿಮಠ, ಕಿರಣ ದುಖಾಂದಾರ, ಸಂದೀಪ ದಂಡಗಲ, ರೋಹಿತ ಅಲಕುಂಟೆ, ಪ್ರೀತಂ ಉಪರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts