More

    ವಿದ್ಯಾರ್ಥಿ ಮಿತ್ರನಿಂದ 625 ಅಂಕ, ಸರ್ಜಾಪುರದ ಸರ್ದಾರ್ ವಲ್ಲಭಭಾಯಿ ಪಟೇಲ್ ಶಾಲೆ ವಿದ್ಯಾರ್ಥಿ ಆದಿತ್ಯ ಸಂತಸ

    ಸರ್ಜಾಪುರ: ಸರ್ಜಾಪುರದ ಸರ್ದಾರ್ ವಲ್ಲಭಭಾಯಿ ಪಟೇಲ್ ಶಾಲೆಯ ವಿದ್ಯಾರ್ಥಿ ಎ.ಎಸ್. ಆದಿತ್ಯ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಈ ಸಾಧನೆಗೆ ಪ್ರಮುಖ ಕಾರಣವಾದ ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ಕ್ಕೆ ಧನ್ಯವಾದ ತಿಳಿಸಿದ್ದಾನೆ.

    ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದ ಆದಿತ್ಯ, ಸರ್ಜಾಪುರ ಗ್ರಾಪಂನಿಂದ ಶಾಲೆಗೆ ಹೋಗುತ್ತಿದ್ದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಓದುತ್ತಿದ್ದ. ಇದರ ಪ್ರಮುಖ ಅಂಶಗಳನ್ನು ಸಂಗ್ರಹಿಸಿ ಅಭ್ಯಾಸ ಮಾಡುತ್ತಿದ್ದ. ಹಾಗೆಯೇ ಶಿಕ್ಷಕರ ನೆರವಿನಿಂದ ಈ ಸಾಧನೆ ಮಾಡಿದ್ದಾನೆ. ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಯನ್ನು ಶಾಲೆ ಆಡಳಿತ ಮಂಡಳಿ ಸಿಹಿ ತಿನಿಸಿ ಗೌರವಿಸಿತು.

    ವಿದ್ಯಾರ್ಥಿ ತಂದೆ ಶ್ರೀನಿವಾಸ್ ಅರ್ಚಕರಾಗಿದ್ದು, ತಾಯಿ ಸುಭಾಷಿಣಿ ಗೃಹಿಣಿಯಾಗಿದ್ದಾರೆ. ಮನೆಯಲ್ಲಿ ಬಡತನ ಇದ್ದರೂ ಓದಿಗೆ ಬಡತನ ಇಲ್ಲ ಎನ್ನುವುದನ್ನು ವಿದ್ಯಾರ್ಥಿ ಸಾಧಿಸಿ ತೋರಿಸಿದ್ದಾನೆ.

    ಸರ್ಜಾಪುರ ಸಮೀಪದ ಕಾಮನಹಳ್ಳಿಯಿಂದ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿ, ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪಾಠವನ್ನು ಅಚ್ಚುಕಟ್ಟಾಗಿ ಅಭ್ಯಾಸ ಮಾಡುತ್ತಿದ್ದ. ವಿದ್ಯಾರ್ಥಿಯ ಸಾಧನೆಗೆ ಶಾಲೆ ಆಡಳಿತ ಮಂಡಳಿಗೆ ಹೆಸರು ಬರುವಂತಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಡಾ. ರವೀಂದ್ರರೆಡ್ಡಿ ಸಂತಸ ವ್ಯಕ್ತಪಡಿಸಿದರು.

    ಶಾಲೆ ಉಪಾಧ್ಯಕ್ಷ ಎಸ್.ಎ.ಪ್ರಭು, ಖಜಾಂಚಿ ಎ.ಎನ್. ನಾಗರಾಜಶೆಟ್ಟಿ, ಕಾರ್ಯದರ್ಶಿ ಎಸ್ ವಿ ರವೀಂದ್ರ, ಶಿಕ್ಷಕರಾದ ಹರೀಶ್, ರಾಮಕೃಷ್ಣ,ಬಿ.ಎನ್. ಮಂಜುಳಾ, ಎಂ.ನಾಗರಾಜ್, ಕೆ.ಶೈಲಜಾ, ಎ.ಪಾಪಣ್ಣ, ವಿ.ರಾಮಕೃಷ್ಣ, ಎನ್.ಸರಸ್ವತಿ, ಮಧುಮಾಲ ಎಸ್.ಎಂ. ಮತ್ತಿತರರು ಇದ್ದರು.

    50 ಸಾವಿರ ರೂ. ನೀಡಿ ಸನ್ಮಾನ: ವಿದ್ಯಾರ್ಥಿಯ ಸಾಧನೆಯನ್ನು ಮೆಚ್ಚಿ ಸರ್ದಾರ್ ವಲ್ಲಭಭಾಯಿ ಪಟೇಲ್ ಶಾಲೆ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಆರ್.ಮನೋಹರ್ 50 ಸಾವಿರ ರೂ. ಹಾಗೂ ಸಿಹಿ ನೀಡಿ ವಿದ್ಯಾರ್ಥಿಯನ್ನು ಸನ್ಮಾನಿಸಿದರು. ವಿದ್ಯಾರ್ಥಿಯ ಸಾಧನೆ ತಾಲೂಕಿನ ಕೀರ್ತಿ ಹೆಚ್ಚಿಸಿದೆ. ಈ ಸಾಧನೆಯನ್ನು ಇತರ ವಿದ್ಯಾರ್ಥಿಗಳು ಮಾದರಿಯನ್ನಾಗಿ ಇಟ್ಟುಕೊಂಡು ಉತ್ತಮ ಶಿಕ್ಷಣ ಪಡೆದು ಹೆಚ್ಚು ಅಂಕಗಳಿಸಬೇಕು ಎಂದು ಮನೋಹರ್ ತಿಳಿಸಿದರು.

    ಮಗನ ಸಾಧನೆ ಸಂತಸ ತಂದಿದೆ. ಎಲ್ಲರ ಮಾರ್ಗದರ್ಶನ ಹಾಗೂ ದೇವರ ಕೃಪೆಯಿಂದ ಸಾಧನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಅವನು ಇನ್ನಷ್ಟು ಸಾಧನೆ ಮಾಡಬೇಕು ಎನ್ನುವುದು ನಮ್ಮ ಆಶಯ.
    ಶ್ರೀನಿವಾಸ್, ವಿದ್ಯಾರ್ಥಿ ತಂದೆ

    ಶಾಲೆಗೆ ಪ್ರತಿದಿನ ಬರುತ್ತಿದ್ದ ವಿಜಯವಾಣಿ ವಿಜಯವಾಣಿ ವಿದ್ಯಾರ್ಥಿ ಮಿತ್ರ ಓದುತ್ತಿದ್ದೆ. ಶಾಲೆ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಕೂಡ ಸಹಕಾರ ನೀಡಿತ್ತು. ಮೊದಲನೇ ಸ್ಥಾನ ಪಡೆದಿರುವುದಕ್ಕೆ ಸಂತೋಷವಾಗುತ್ತಿದೆ.
    ಆದಿತ್ಯ, ಸರ್ಜಾಪುರದ ಸರ್ದಾರ್ ವಲ್ಲಭಭಾಯಿ ಪಟೇಲ್ ಶಾಲೆ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts