More

    ವಿದ್ಯಾರ್ಥಿಗಳ ಆರೋಗ್ಯ ಮುಖ್ಯವೆಂದ ಮುರುಘಾ ಶರಣರು

    ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
    ಪದವಿ,ಸ್ನಾತಕೋತ್ತರ ಪದವಿ ಕಾಲೇಜುಗಳ ಪುನರ್ ಆರಂಭಿಸುವ ಸರ್ಕಾರಿ ಆದೇಶದ ಹಿನ್ನೆಲೆಯಲ್ಲಿ ಮುರುಘರಾಜೇಂದ್ರ ಮಠದ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ಶನಿವಾರ ನಗರದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಎಸ್‌ಜೆಎಂ ಕಾಲೇಜುಗಳ ಮುಖ್ಯಸ್ಥ ರೊಂದಿಗೆ ಸಮಾಲೋಚನೆ ನಡೆಸಿದರು.
    ಈ ವೇಳೆ ಮಾತನಾಡಿದ ಶರಣರು,ವಿದ್ಯಾರ್ಥಿಗಳ ಆರೋಗ್ಯ ಮುಖ್ಯವಾಗಿದ್ದು ಕೋವಿಡ್ ಎಸ್‌ಒಪಿ ಕಟ್ಟುನಿಟ್ಟಿನ ಅಗತ್ಯ.ನಿರಂತರ ಸ್ವಚ್ಛತೆ, ಸ ಮಯಕ್ಕೆ ಸರಿಯಾಗಿ ಸ್ಯಾನಿಟೈಸರ್ ಸಿಂಪಡಣೆ. ಮಾಸ್ಕ್ ಕಡ್ಡಾಯ ಹಾಗೂ ತುರ್ತು ಅಗತ್ಯವಿದ್ದರೆ ಬಸವೇಶ್ವರ ಆಸ್ಪತ್ರೆ ಸಿಬ್ಬಂದಿ ನೆರವು ಪಡೆಯ ಬೇಕು ಹಾಗೂ ಎಲ್ಲ ಕಾಲೇಜು ಬೋಧಕ,ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯವೆಂದು ಸೂಚಿಸಿದರು.
    ಪ್ರಕೃತಿಯೇ ಶಿಕ್ಷೆ ವಿಧಿಸುತ್ತದೆ
    ಕಾಯಕದ ಮಹತ್ವವನ್ನು ತಿಳಿಯದ ಮೈಗಳ್ಳರಿಗೆ ನಾವು ಶಿಕ್ಷೆ ವಿಧಿಸದಿದ್ದರೂ ಪ್ರಕೃತಿಯೇ ಶಿಕ್ಷೆ ಕೊಡುತ್ತದೆ. ಕೆಲವರು ಗೂಂಡಾಗಳನ್ನು ಇಟ್ಟು ಕೊಂಡು ಜನರನ್ನು ಬೆದರಿಸುತ್ತಿದ್ದಾರೆ, ಮತ್ತೆ ಕೆಲವರು ಸಲ್ಲದ ವಿಚಾರಗಳನ್ನು ಹಬ್ಬಿಸುತ್ತಾ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ,ಆಸ್ತಿ ಪಾಸ್ತಿ,ಕಟ್ಟಡಗಳಿಗೂ ಹಾನಿ ಉಂಟು ಮಾಡುತ್ತಿದ್ದಾರೆ.
    ಏನೂ ಮಾಡದೆ ಎಲ್ಲದನ್ನು ನಾನೇ ಮಾಡಿದೆ ಎನ್ನುವ ಜಾಯಮಾನದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವರು ಎಲೆ ಮರೆ ಕಾಯಿಯಂತೆ ಇರುವ ಪ್ರಾಮಾಣಿಕರು ಇದ್ದಾರೆ. ಚಾಡಿಕೋರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇವೆಲ್ಲದರ ನಡುವೆ ಪಾರದರ್ಶಕ ಜೀವನ ಕಟ್ಟಿಕೊಳ್ಳುವ ಅಗತ್ಯವಿದೆ. ಚಾಡಿ ಹೇಳುವ ಸಮಯವನ್ನೇ ಸದುದ್ದೇಶಕ್ಕೆ ಬಳಸಿಕೊಂಡರೆ ವೈಯಕ್ತಿಕವಾಗಿ ಬೆಳೆಯು ವುದಲ್ಲದೆ ಸುತ್ತಮುತ್ತಲಿನ ಸಮಾಜವನ್ನೂ ಬೆಳೆಸ ಬಹುದೆಂದು ಇದೇ ಸಂದರ್ಭದಲ್ಲಿ ಶರಣರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
    ಎಸ್‌ಜೆಎಂ ವಿದ್ಯಾಪೀಠದ ವಿವಿಧ ಕಾಲೇಜುಗಳ ಪ್ರಾಚಾರ‌್ಯರಾದ ಡಾ.ಕೆ.ಸಿ.ರಮೇಶ್,ಡಾ.ಪಿ.ಶಿವಲಿಂಗಪ್ಪ,ಪ್ರೊ.ಕೆ.ಎನ್.ವಿಶ್ವನಾಥ್, ಡಾ.ಬಿ.ಸಿ. ಶಾಂತಪ್ಪ ಮಾತನಾಡಿದರು.

    ವಿದ್ಯಾಪೀಠ ಆಡಳಿತ ಮಂಡಳಿ ನಿರ್ದೇಶಕರಾದ ಹನುಮಲಿ ಷಣ್ಮುಖಪ್ಪ,ಎಂ.ಟಿ.ಮಲ್ಲಿಕಾರ್ಜುನಸ್ವಾಮಿ,ಡಾ.ಪ್ರಶಾಂತ್,ಡಾ.ಪಾಲಾಕ್ಷ, ಡಾ. ಗೌರಮ್ಮ ಮತ್ತಿತರರು ಇದ್ದರು.ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಎಸ್‌ಜೆಎಂ ವಿದ್ಯಾಪೀಠದ ಕಾರ‌್ಯದರ್ಶಿ ಎ.ಜೆ.ಪರಮಶಿವಯ್ಯ ಸ್ವಾಗತಿಸಿ, ಡಾ.ಸವಿತಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts