More

    ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

    ವಿಜಯಪುರ : ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಆಭ್ಯಾಸವಿರಲಿ ಕ್ರೀಡೆ ಇರಲಿ ಅದರಲ್ಲಿ ಭಾಗವಹಿಸಬೇಕು ಮತ್ತು ಆರೋಗ್ಯಕರ ಸ್ಪರ್ಧಾ ಮನೋಭಾವ ಹೊಂದಿರಬೇಕು. ಜೀವನದಲ್ಲಿ ಧೈರ್ಯದಿಂದ ಮುನ್ನುಗ್ಗಿ ಏನಾದರು ಒಂದು ವಿಶಿಷ್ಟವಾದುದನ್ನು ಸಾಧಿಸಿ ಶಾಲೆ ಮತ್ತು ಪಾಲಕರ ಕೀರ್ತಿಯನ್ನು ತರಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ ಹೇಳಿದರು.

    ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಮತ್ತೋರ್ವ ಅತಿಥಿ ಡಾ.ಬಾಳಪ್ಪಗೌಡ ಪಾಟೀಲ್ ಮಾತನಾಡಿ, ದೇಶ ಮತ್ತು ಸಮಾಜಕ್ಕೆ ಒಳಿತಾಗುವಂತೆ ನಾವು ಕೆಲಸವನ್ನು ಮಾಡಬೇಕು. ನನ್ನ ಏಳಿಗೆಗೆ ಈ ಶಾಲೆ ಮತ್ತು ಶಿಕ್ಷಕರು ಕಾರಣ. ನಾನು ಕಲಿತ ಶಾಲೆಯ ಬಗ್ಗೆ ನನಗೆ ಹೆಮ್ಮ ಇದೆ. ವಿದ್ಯಾರ್ಥಿಗಳು ಕಷ್ಟ ಪಟ್ಟು ಕಲಿಯದೆ ಇಷ್ಟ ಪಟ್ಟು ಕಲಿಯಬೇಕು ಎಂದರು.
    ಸಂಸ್ಥೆಯ ಕಾರ್ಯದರ್ಶಿ ಡಾ.ಸುರೇಶ ಬಿರಾದಾರ ಮಾತನಾಡಿ, ಸಮಾಜದಲ್ಲಿ ಉನ್ನತವಾದ ಸ್ಥಾನಮಾನವನ್ನು ಗಳಿಸಬೇಕೆಂದರೆ ವಿದ್ಯಾರ್ಥಿದಿಸೆಯಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಉನ್ನತವಾದ ಸ್ಥಾನಮಾನವನ್ನು ಪಡೆದ ನಂತರ ಬಡವರು ನಿರ್ಗತಿಕರನ್ನು ಮರೆಯಬಾರದು. ದೇಶ ಮತ್ತು ಸಮಾಜಕ್ಕೆ ಒಳಿತಾಗುವಂತಹ ಕೆಲಸವನ್ನು ಮಾಡಬೇಕು ಎಂದು ನುಡಿದರು.
    ನಂತರ ಮಕ್ಕಳಿಂದ ದೇಶ ಭಕ್ತಿಗೀತೆ, ವೇಷಭೂಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಪ್ರಾಚಾರ್ಯ ಶ್ರೀಧರ ಕುರಬೆಟ್, ಶಿಕ್ಷಕಿ ಮೊಹಸೀನಾ ಇನಾಮದಾರ, ಜ್ಯೋತಿ ಅಣೆಪ್ಪನವರ, ಸಂಸ್ಥೆಯ ನಿರ್ದೇಶಕ ಭರತ್ ಬಿರಾದಾರ, ದಿವ್ಯಾ ಶರತ್ ಬಿರಾದಾರ, ಶಾಲಾ ಸಂಯೋಜಕಿ ಪೂಜಾ ಖನಗೆ, ಶಿಕ್ಷಕರಾದ ಪ್ರವೀಣ ಗೆಣ್ಣೂರ, ಎ.ಎಚ್. ಸಗರ, ಅನೀಲ ಬಾಗೆವಾಡಿ, ಅಶ್ವೀನ ವಗದರಗಿ, ಬಸವರಾಜ ರೆಬಿನಾಳ, ಪರಮಾನಂದ ಅಂಬಿ, ಶಶಿಧರ ಲೋನಾರಮಠ, ಈಶ್ವರ ಪೂಜಾರಿ, ಶ್ರೀದೇವಿ ಜೊಳದ, ಸವಿತಾ ಪಾಟೀಲ್, ಸೀಮಾ ಸದಲಗ, ಸರೊಜಾ ಕರಕಳ್ಳಿ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts