More

    ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಅವಶ್ಯ

    ಹಿರೀಸಾವೆ: ಉನ್ನತ ವ್ಯಾಸಂಗಕ್ಕೆ ಹಾಗೂ ಮುಂದೆ ಉದ್ಯೋಗಾವಕಾಶಗಳಿಗಾಗಿ ಕಂಪ್ಯೂಟರ್‌ಬಳಕೆ ಮತ್ತು ಆಂಗ್ಲ ಭಾಷಾ ಜ್ಞಾನ ಬಹಳ ಮುಖ್ಯ. ಪದವಿ ಹಂತದಲ್ಲಿ ಇರುವ ವಿದ್ಯಾರ್ಥಿಗಳು ಇವುಗಳ ಕಡೆ ಹೆಚ್ಚು ಗಮನಹರಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸಲಹೆ ನೀಡಿದರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 2022-23ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

    ವಿದ್ಯಾರ್ಥಿಗಳು ಗ್ರಂಥಾಲಯವನ್ನು ಹೆಚ್ಚು ಬಳಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗುತ್ತದೆ. ತಂತ್ರಜ್ಞಾನ ಯುಗದಲ್ಲಿ ನಾವುಗಳು ಇರುವುದರಿಂದ ವಿವಿಧ ಜಾಲತಾಣದಲ್ಲಿ ಎಲ್ಲ ರೀತಿಯ ಪುಸ್ತಕಗಳು ಹಾಗೂ ಮಾಹಿತಿ ಲಭ್ಯವಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.

    ಗ್ರಾಮೀಣ ಭಾಗದ ಮಕ್ಕಳಿಗೂ ವಿವಿಧ ರೀತಿಯ ಕೋರ್ಸ್‌ಗಳು ಅಗತ್ಯವಿದ್ದು, ಮುಂದಿನ ವರ್ಷದಿಂದ ಈ ಕಾಲೇಜಿನಲ್ಲಿ ಬಿಸಿಎ ವಿಭಾಗ ಪ್ರಾರಂಭ ಮಾಡುವ ಬಗ್ಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಾಲಕೃಷ್ಣ ಭರವಸೆ ನೀಡಿದರು.

    ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಲೇಖಕ ಡಾ.ಎಚ್.ಲೊಕೇಶ್, ಪ್ರಾಂಶುಪಾಲ ಡಾ.ಬಸವರಾಜು, ರೈತ ಸಂಘದ ಎಚ್.ವಿ.ಕೃಷ್ಣೇಗೌಡ, ಕರವೇ ಸದಸ್ಯ ನಾಗೇಂದ್ರಬಾಬು, ವಿವಿಧ ವಿಭಾಗಗಳ ಸಂಚಾಲಕರಾದ ಎಲ್.ಲತಾ, ಮೋಹನ್ ಕುಮಾರ್, ಪಿ.ಬಿ.ಕುಮಾರ್ ಮತ್ತು ಪ್ರಾಧ್ಯಾಪಕರು ವೇದಿಕೆಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts