More

    ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    ಮೈಸೂರು: ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ವಿದ್ಯಾರಣ್ಯರು ಆದರ್ಶಪ್ರಾಯರು. ಅವರೊಬ್ಬ ವಿಭೂತಿಪುರುಷರು ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

    ಹಿಮಾಲಯ ಪ್ರತಿಷ್ಠಾನದ ವತಿಯಿಂದ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯೋತ್ಸವ ಹಾಗೂ ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

    ರಾಜ್ಯ ಬ್ರಾಹ್ಮಣ ಮಹಾಸಭಾ ವಲಯ ಉಪಾಧ್ಯಕ್ಷ ಬಿ.ಆರ್. ನಟರಾಜ ಜೋಯಿಸ್ ಮಾತನಾಡಿ, ವಿದ್ಯಾರಣ್ಯರು ಒಳ್ಳೆಯ ನಾಡನ್ನು ಕಟ್ಟಿದ್ದಾರೆ. ನಾವು ಕೂಡ ಅದೇ ರೀತಿ ಉತ್ತಮ ಸಮಾಜವನ್ನು ಕಟ್ಟೋಣ ಎಂದರು.


    ದೃಶ್ಯಮಾಧ್ಯಮದಲ್ಲಿ ಸುದ್ದಿಯನ್ನು ವೈಭವೀಕರಣ ಮಾಡುವ ಮೂಲಕ ಜನರನ್ನು ದಾರಿತಪ್ಪಿಸಲಾಗುತ್ತಿದೆ. ಗ್ರಹಣದ ಬಗ್ಗೆ ಗೊತ್ತಿಲ್ದವರನ್ನೆಲ್ಲ ಕೂರಿಸಿಕೊಂಡು ಚರ್ಚೆ ನಡೆಸಲಾಗುತ್ತಿದೆ. ಇದು ತಪ್ಪಬೇಕು. ಸಮಾಜವನ್ನು ಸರಿದಾರಿಯಲ್ಲಿ ನಡೆಸಲು ಮಾರ್ಗದರ್ಶನ ಮಾಡಬೇಕು ಎಂದರು


    ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಕೆ. ಗುರುಪಾದ ಹೆಗಡೆ(ವಿದ್ವತ್ತು), ಆರ್.ವೆಂಕಟೇಶ್(ಕಲೆ), ಡಾ.ಗೀತಾ ಅವಧಾನಿ( ವೈದ್ಯಕೀಯ), ವಸಂತ ವೆಂಕಟೇಶ್(ಮುಕ್ತಕ ಸಾಹಿತ್ಯ), ಕೆ.ಲಕ್ಷ್ಮೀ(ಸಾಹಿತ್ಯ), ಅಂಶಿ ಪ್ರಸನ್ನಕುಮಾರ್ (ಪತ್ರಿಕಾರಂಗ), ಡಾ.ಪಿ.ಎನ್. ಗಣೇಶ್‌ಕುಮಾರ್ (ಯೋಗ), ಕೆ. ದಶರಥ (ಸಮಾಜಸೇವೆ), ಚಂದನ್‌ಗೌಡ (ಮಣ್ಣಿನ ಸೇವೆ) ಅವರಿಗೆ ಆಚಾರ್ಯ ಶ್ರೀವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.


    ಕಮಲಾ ರಾಜೇಶ್ ಅವರ ‘ಶ್ರೀನಿವಾಸ ಕಲ್ಯಾಣ’ ಕೃತಿಯನ್ನು ಅರ್ಕಧಾಮದ ಸಂಸ್ಥಾಪಕ ಶ್ರೀನಿವಾಸ ಅರ್ಕ ಬಿಡುಗಡೆ ಮಾಡಿದರು. ಕೃತಿ ಕುರಿತು ರಾಜ್ಯ ಮುಕ್ತಕ ಕವಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಎಂ. ಮುತ್ತುಸ್ವಾಮಿ ಮಾತನಾಡಿದರು.


    ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಮಾಜ ಸೇವಕ ಕೆ. ರಘುರಾಮ್, ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ ಕಾರ್ಯಪಾಲಕ ಇಂಜಿನಿಯರ್ ಡಿ.ಅಶ್ವಿನ್, ಕೆಎಸ್‌ಆರ್‌ಟಿಸಿ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಟಿ.ಬಸವರಾಜು, ಉದ್ಯಮಿ ಎಂ.ಆರ್. ರಾಹುಲ್, ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಕಾರ್ಯದರ್ಶಿ ಉಮಾಶಂಕರ್, ಉಪಾಧ್ಯಕ್ಷ ಬಿ.ಉಮೇಶ್ ಇನ್ನಿತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts