More

    ವಿದ್ಯಾಗಮದಿಂದ ಕಲಿಕೆಯಲ್ಲಿ ಹೊಸತನ

    ಗುತ್ತಲ: ಮಕ್ಕಳ ಕಲಿಕೆಯಲ್ಲಿ ಹೊಸತನ ತರುವ, ಮಕ್ಕಳಿರುವಲ್ಲಿಗೆ ಶಿಕ್ಷಕರು ಹೋಗಿ ಅವರೊಂದಿಗೆ ಬೆರೆತು ಕಲಿಸುವುದೇ ವಿದ್ಯಾಗಮದ ಪ್ರಮುಖ ಉದ್ದೇಶವಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷೆ ವಿಭಾಗದ ನಿರ್ದೇಶಕ ಪ್ರಸನ್ನಕುಮಾರ ಹೇಳಿದರು.

    ಸಮೀಪದ ಹಂದಿಗನೂರ ಗ್ರಾಮದ ದೇವಸ್ಥಾನದಲ್ಲಿ ವಿದ್ಯಾಗಮ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, ಹಾವೇರಿ ತಾಲೂಕಿನಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಕೋವಿಡ್ ಸಂಕಷ್ಟದಲ್ಲಿಯೂ ಶಿಕ್ಷಕರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದು, ಅವರೊಂದಿಗೆ ಪಾಲಕರು ಕೈ ಜೋಡಿಸಬೇಕು. ಆಗ ವಿದ್ಯಾಗಮ ಕಾರ್ಯಕ್ರಮ ಯಶಸ್ವಿ ಆಗಲು ಸಾಧ್ಯ ಎಂದರು.

    ದೂರದರ್ಶನದಲ್ಲಿ ಪ್ರಸಾರವಾಗುವ ಸಂವೇದ ತರಗತಿಗಳನ್ನು ಮಕ್ಕಳು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಟಿವಿ, ಮೊಬೈಲ್ ಫೋನ್ ಇಲ್ಲದ ಮಕ್ಕಳು ಆಂತಕಪಡದೆ ತಮ್ಮ ಸ್ನೇಹಿತರ ಮನೆಗಳಲ್ಲಿ ಪಾಠ ಆಲಿಸಬೇಕು ಎಂದರು.

    ನಂತರ ಎಂ.ಜಿ. ತಿಮ್ಮಾಪೂರ, ಬಸಾಪೂರ, ಹಳೇರಿತ್ತಿ, ಹೊಸರಿತ್ತಿ, ಹಂದಿಗನೂರ ಗ್ರಾಮಗಳಿಗೆ ಭೇಟಿ ಮಾಡಿ ವಿದ್ಯಾಗಮ ಪ್ರಕ್ರಿಯೆ ಪರಿಶೀಲಿಸಿದರು.

    ಹಾವೇರಿ ಬಿಇಒ ಎಂ.ಎಚ್. ಪಾಟೀಲ, ಬ್ಯಾಡಗಿ ಬಿಇಒ ರುದ್ರಮುನಿ, ರಾಣೆಬೆನ್ನೂರ ಬಿಇಒ ಶ್ರೀಧರ ಎನ್., ಸಿಆರ್​ಪಿಗಳಾದ ಎಂ.ವೈ. ರ್ಬಾ, ಎಂ.ಎಫ್. ಭಗವಂತಗೌಡ್ರ, ಬಿ.ಎಂ. ಅರಳಿ, ಎ.ಪಿ. ಲೋಕೇಶ, ರಾಜು ಬಜ್ಜಿ, ಮುಖ್ಯೋಪಾಧ್ಯಾಯರಾದ ಎಂ.ಸಿ. ಕುಲಕರ್ಣಿ, ಕೆ.ವಿ. ಮೇಲ್ಮುರಿ, ಮಡಿವಾಳ, ಆರ್.ಐ. ಮಿಶ್ರಿಕೋಟಿ, ಎಸ್.ಬಿ. ಗಂಜಿಗಟ್ಟಿ, ಶಿಕ್ಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts