More

    ವಿಟಿಯು-ಎಎಫ್‌ಟಿಸಿ ಶೈಕ್ಷಣಿಕ ಒಡಂಬಡಿಕೆ

    ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಏರ್‌ಫೋರ್ಸ್ ತಾಂತ್ರಿಕ ಮಹಾವಿದ್ಯಾಲಯ ಗುರುವಾರ ಮಹತ್ವದ ಶೈಕ್ಷಣಿಕ ಒಡಂಬಡಿಕೆಗೆ ಸಹಿ ಹಾಕಿವೆ. ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಉಪಸ್ಥಿತಿಯಲ್ಲಿ ಎಎಫ್‌ಟಿಸಿಏರ್ ಕಮಾಂಡೆಂಟ್ ಬಿ.ಜಿ.ಫಿಲಿಪ್, ವಿಟಿಯು ಕುಲಸಚಿವ ಪ್ರೊ. ಎ.ಎಸ್.ದೇಶಪಾಂಡೆ ಒಪ್ಪಂದಕ್ಕೆ ಸಹಿ ಹಾಕಿದರು.

    ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ, ಈ ಒಪ್ಪಂದವು ಎರಡೂ ಸಂಸ್ಥೆಗಳ ಕೌಶಲ ಮತ್ತು ಸಂಶೋಧನಾ ಸಾಮರ್ಥ್ಯ ಹೆಚ್ಚಿಸುತ್ತದೆ. ಏರ್‌ಫೋರ್ಸ್‌ಗೆ ನೇಮಕಗೊಂಡು ಸ್ನಾತಕೋತ್ತರ ಶಿಕ್ಷಣ ಮುಂದುವರಿಸಲು ಬಯಸುವ ಅಧಿಕಾರಿಗಳಿಗೆ ಎಎಫ್‌ಟಿ-ಸಿವಿಟಿಯು ಮೂಲಕ ಎಂಟೆಕ್ ಪದವಿ ನೀಡಬಹುದು. ಏರೋನಾಟಿಕಲ್ ಇಂಜಿನಿಯರಿಂಗ್‌ನ ಆರು ವಿಶೇಷ ವಿಷಯಗಳಲ್ಲಿ ಈ ಪದವಿಯನ್ನು ಎಐಸಿಟಿ ನಿಯಮದಂತೆ ನೀಡಲಾಗುತ್ತದೆ ಎಂದರು. ಏರ್‌ಫೋರ್ಸ್ ಗ್ರೂಪ್ ಕ್ಯಾಪ್ಟನ್ ಡಾ.ರಾಜು ಹಾಗೂ ಅಧ್ಯಯನ ವಿಭಾಗ ಮುಖ್ಯಸ್ಥ ಡಾ.ಮಹೇಶ ಎಮ್ಮಿ, ವಿಟಿಯು ವಿಶೇಷಾಧಿಕಾರಿ ಪ್ರೊ. ಎಂ.ಎಂ. ಮುನ್ಷಿ ಹಾಗೂ ಪ್ರೊ. ಎಸ್.ಬಿ. ಹಾಲಬಾವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts