More

    ವಿಜ್ಞಾನ ನಂಬಿದರೆ ಸರಿದಾರಿಯಲ್ಲಿ ಬದುಕು

    ಚಿತ್ರದುರ್ಗ: ಮೂಢನಂಬಿಕೆ,ಕಂದಾಚಾರಗಳನ್ನು ಕೈಬಿಟ್ಟು ವಿಜ್ಞಾನವನ್ನು ನಂಬಿ ಸರಿದಾರಿಯಲ್ಲಿ ಬದುಕು ಸಾಗಿಸಬೇಕೆಂದು ರಾಜ್ಯ ವೈಜ್ಞಾನಿಕ ಸಂಶೋಧನ ಪ ರಿಷತ್ ಜಿಲ್ಲಾಧ್ಯಕ್ಷ ನಾಗರಾಜ್‌ಸಂಗಂ ಹೇಳಿದರು. ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ
    ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು,ರೋಗಗಳಿಗೆ ವೈದ್ಯರು ಸಲಹೆಯಂತೆ ಸೂಕ್ತ ಚಿಕಿತ್ಸೆ ಪಡೆಯ ಬೇಕೆ ವಿನಾ ಕಂ ದಾಚಾರಗಳಿಗೆ ಮೊರೆ ಹೋಗಬಾರದು. ರಾಜ್ಯಸರ್ಕಾರ ಫೆ.28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಶಾಲೆಗಳಲ್ಲಿ ಆಚರಿಸಲು ಸುತ್ತೋಲೆ ಹೊ ರಡಿಸಿದೆ ಎಂದರು.
    ಪರಿಷತ್ ಜಿಲ್ಲಾಕಾರ್ಯದರ್ಶಿ ಪಿ.ಲೋಕೇಶ್ ಮಾತನಾಡಿ,ನಮ್ಮ ಜೀವನಕ್ಕೆ ವಿಜ್ಞಾನದಿಂದಾಗುವ ಹತ್ತು ಹಲವು ಉಪಯೋಗಳನ್ನು ಅರಿಯ ಬೇ ಕಿದೆ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ಎಂ.ಬಸವರಾಜ ಹುರಳಿ ಮಾತನಾಡಿದರು. ಜೆ.ಬಿ.ಕಿರಣ್‌ಶಂಕರ್, ಆ ರ್.ಶೈಲಜಾಬಾಬು, ಎಂ.ರಂಗಪ್ಪ,ಕೆಂಚಪ್ಪ ಮತ್ತಿತರ ಪರಿಷತ್ ಪ್ರಮುಖರು ಇದ್ದರು. ಮುಖ್ಯಶಿಕ್ಷಕ ಎಚ್.ಟಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಲಕ್ಷ್ಮೀ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts