More

    ವಿಜೃಂಭಣೆಯ ರುದ್ರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ, ವಿಶೇಷ ಹೂವಿನ ಅಲಂಕಾರ

    ನೆಲಮಂಗಲ: ಪಟ್ಟಣದ ಜನರಲ್ಲಿ ಹಬ್ಬದ ವಾತಾವರಣ ನಿರ್ಮಿಸುವ ನಗರದ ಪೇಟೆ ಬೀದಿಯ ಶ್ರೀ ರುದ್ರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

    ರುದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಶುಕ್ರವಾರ ನಡೆದ ಸಾಂಪ್ರದಾಯಿಕ ಸಂಭ್ರಮದ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ರುದ್ರೇಶ್ವರ ಸ್ವಾಮಿ ಉತ್ಸವಮೂರ್ತಿಯನ್ನು ರಥದಲ್ಲಿರಿಸಿದ ಜಯಘೋಷಗಳೊಂದಿಗೆ ರಥ ಎಳೆಯಲಾಯಿತು. ಭಕ್ತರು ರಥಕ್ಕೆ ದವನ ಸಹಿತ ಬಾಳೆಹಣ್ಣನ್ನು ಎಸೆದು ಭಕ್ತಿ ಸಮರ್ಪಿಸಿದರು.

    ಜಾನಪದ ಕಲಾತಂಡಗಳ ಮೆರುಗು: ರಥೋತ್ಸವದುದ್ದಕ್ಕೂ ವೀರಗಾಸೆ, ನಂದಿಧ್ವಜ ಕುಣಿತ, ಜಾನಪದ ಕಲಾತಂಡಗಳ ಕಲಾವಿದರ ನೃತ್ಯ ಆಕರ್ಷಿಸಿದವು. ರಥಬೀದಿಯಲ್ಲಿನ ಕೆಲ ನಿವಾಸಿಗಳು ಭಕ್ತರಿಗೆ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಿಸಿದರು. ದೇವಾಲಯದ ಸಮಿತಿ ಅನ್ನದಾಸೋಹ ಏರ್ಪಡಿಸಿತ್ತು.

    ನಗರಸಭೆ ಸದಸ್ಯೆ ಎನ್.ಎಸ್. ಪೂರ್ಣಿಮಾ, ಟೌನ್‌ಕೋ ಆಪರೇಟೀವ್ ಸೊಸೈಟಿ ಅಧ್ಯಕ್ಷ ಎನ್.ಎಚ್. ಜಯದೇವಯ್ಯ, ನಿರ್ದೇಶಕ ಎನ್. ಚನ್ನಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ ಆರ್. ಉಮಾಶಂಕರ್, ಕವಾಡಿಮಠ ರುದ್ರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎನ್.ಎಸ್. ಜಗದೀಶ್, ಮುಖಂಡರಾದ ಎನ್.ಬಿ. ದಯಾಶಂಕರ್, ಪುಟ್ಟಣ್ಣ, ಎನ್.ಜಿ. ರುದ್ರಮೂರ್ತಿ, ಎನ್. ಉಮೇಶಾರಾಧ್ಯ, ಎನ್. ಷಣ್ಮುಕಾರಾಧ್ಯ, ಎಲ್‌ಐಸಿ ಮಹೇಶ್, ಎನ್.ವಿ. ಯತೀಶ್, ಕೇಬಲ್ ಸುರೇಶ್, ಎನ್.ಡಿ. ಪ್ರಸನ್ನಕುಮಾರ್, ಎನ್.ಯು. ದೀಪು, ಎನ್.ಆರ್. ಸಂತೋಷ್, ಶ್ರೀ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎನ್.ಎಸ್. ಗಣೇಶ್, ಸದಸ್ಯರಾದ ಎನ್.ಎಸ್. ಚಂದ್ರಶೇಖರ್, ಎನ್. ಕಾರ್ತಿಕ್, ಎನ್. ವಿನಯ್‌ಕುಮಾರ್ ಮತ್ತಿತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts