More

    ವಿಜೃಂಭಣೆಯ ಮಾಯಮ್ಮ ದೇವಿ ಉತ್ಸವ

    ಸಾಲಿಗ್ರಾಮ: ಸಮೀಪದ ದೊಡ್ಡಕೊಪ್ಪಲು ಗ್ರಾಮದಲ್ಲಿ ಮಾಯಮ್ಮ ದೇವಿಯ ಉತ್ಸವ ಶುಕ್ರವಾರ ರಾತ್ರಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

    ನಾಗಮಂಗಲ ತಾಲೂಕಿನ ಹರಳಹಳ್ಳಿ ಗ್ರಾಮದಿಂದ ಆಗಮಿಸಿದ ದೇವರನ್ನು ಹೊಸೂರಿನ ರಾಮಲಿಂಗೇಶ್ವರ ದೇವಾಲಯದ ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಆ ಬಳಿಕ ದೇವರಿಗೆ ಚಾಮರಾಜನಾಲೆಯಲ್ಲಿ ಮಜ್ಜನ ಮಾಡಿಸಿ ನಾಲೆ ದಡದಲ್ಲಿ ಹಾಕಲಾಗಿದ್ದ ಚಪ್ಪರದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ನಂತರ ತಂಬಿಟ್ಟು ಆರತಿ ಮತ್ತು ಕಳಸ ಹೊತ್ತ ಮಹಿಳೆಯರೊಂದಿಗೆ ಮೆರವಣಿಗೆ ಮೂಲಕ ಹೊಸೂರು ಮತ್ತು ಹಳಿಯೂರು ಮಾರ್ಗವಾಗಿ ಗ್ರಾಮಕ್ಕೆ ಕರೆತರಲಾಯಿತು.

    ಗ್ರಾಮದಲ್ಲಿ ತಳಿರು ತೋರಣ ಮತ್ತು ವಿದ್ಯುತ್ ಅಲಂಕಾರದಿಂದ ಶೃಂಗಾರಗೊಂಡಿದ್ದ ಗ್ರಾಮದ ಬೈರವೇಶ್ವರ ದೇವಾಲಯಕ್ಕೆ ದೇವರನ್ನು ತಂದು ಪ್ರತಿಷ್ಠಾಪನೆ ಮಾಡಲಾಯಿತು. ನಂತರ ವಿಶೇಷ ಪೂಜೆ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

    ಈ ವೇಳೆ ಮಾಯಮ್ಮ ತಾಯಿಗೆ ಪೂಜೆ ಸಲ್ಲಿಸಿದರು. ಶನಿವಾರ ಬೆಳಗ್ಗೆ ದೇವಾಲಯದಲ್ಲಿ ಬೆಲ್ಲ ಮತ್ತು ಮೊಸರಿನ ತಳಿಗೆ ಪೂಜೆ ನೆರವೇರಿಸಲಾಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆಯನ್ನು ಮಾಡಿ ದೇವರನ್ನು ಮೆರವಣಿಗೆ ಮೂಲಕ ಬೀಳ್ಗೊಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts