More

    ವಿಜಯವಾಣಿ ಯುಗಾದಿ ವಿಶೇಷಾಂಕ ಬಿಡುಗಡೆ: ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ : ಓದುಗರಿಂದ ಸಂಚಿಕೆಗೆ ಭಾರಿ ಬೇಡಿಕೆ

    ಕಮಿಷನರ್ ಎಸ್ಪಿ ಡಿಸಿಪಿ ಇತರ ಅಧಿಕಾರಿಗಳ ಜತೆಗೂಡಿ ವಿಶೇಷಾಂಕ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್. ಬಿ | ಕಥೆ ಕವನ ಲೇಖನಗಳ ಹೂರಣ ಓದುಗರಿಗೆ ರಸದೌತಣ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಭಾರತೀಯರ ಹೊಸ ವರ್ಷ ಯುಗಾದಿ (ಕ್ರೋಧಿ ಸಂವತ್ಸರ) ಅಂಗವಾಗಿ ಕನ್ನಡದ ನಂ.೧ ದಿನಪತ್ರಿಕೆ ವಿಜಯವಾಣಿ ಹೊರತಂದಿರುವ ಯುಗಾದಿ ವಿಶೇಷಾಂಕವನ್ನು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹಾಗೂ ಜಿಲ್ಲಾಡಳಿತದ ಎಲ್ಲ ಹಿರಿಯ ಅಧಿಕಾರಿಗಳು ಸೇರಿ ಸೋಮವಾರ ಬಿಡುಗಡೆಗೊಳಿಸಿದರು. ವಿಶೇಷಾಂಕ ಮಾರುಕಟ್ಟೆಯಲ್ಲಿ ಲಭ್ಯವಿದೆ.
    ವಿಜಯವಾಣಿ ವಿಶೇಷಾಂಕ ಸಾಹಿತ್ಯ, ಜನಪದ, ಕಥೆ, ಕವನ, ಹನಿಗವನಗಳ ಜತೆ ಹಬ್ಬದ ವಿಶೇಷತೆ ಹೀಗೆ ಹಲವು ಆಸಕ್ತಿದಾಯ ಮಾಹಿತಿ ನೀಡುವ ಲೇಖನಗಳನ್ನು ಹೊಂದಿದೆ. ಪ್ರತಿಯೊಬ್ಬರೂ ಓದುವಂಥ ವಿಶೇಷಾಂಕ ಇದಾಗಿದೆ ಎಂದು ಡಿಸಿ ಫೌಜಿಯಾ ತರನ್ನುಮ್, ಪೊಲೀಸ್ ಆಯುಕ್ತ ಚೇತನ್ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯಕುಮಾರ ಹಾಕೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಪಾಲಿಕೆ ಉಪ ಆಯುಕ್ತ ಮಹಾದೇವ ಗಿತ್ತೆ, ಹೆಚ್ಚುವರಿ ಡಿಸಿ ರಾಯಪ್ಪ ಹುಣಸಗಿ ಮೆಚ್ಚುಗೆ ವ್ಯಕ್ತಪಡಿಸಿದರು.
    ಸಿನಿಮಾ, ಫ್ಯಾಶನ್, ಕ್ರೀಡೆ, ರಾಜಕೀಯ ಇತಿಹಾಸ ಸೇರಿ ಸಮಗ್ರ ಮಾಹಿತಿಯ ಹೂರಣ ಹೊಂದಿರುವ ಎಲ್ಲರೂ ಓದುವಂತಹ ಮತ್ತು ಸಂಗ್ರಹಯೋಗ್ಯ ಸಂಚಿಕೆಯಾಗಿದೆ ಎಂದರು.
    ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ, ಮುಖ್ಯ ವರದಿಗಾರ ಜಯತೀರ್ಥ ಪಾಟೀಲ್, ವರದಿಗಾರ ರಮೇಶ ಮೇಳಕುಂದಿ, ಜಾಹೀರಾತು ವಿಭಾಗದ ರಾಘವೇಂದ್ರ ಕುಲಕರ್ಣಿ, ಅರುಣ ಗಡ್ಡದ, ಹನುಮೇಶ ಕುಲಕರ್ಣಿ, ಪ್ರಸಾರಾಂಗ ವಿಭಾಗದ ರೇವಣಸಿದ್ದಪ್ಪ ಜವಳಿ, ಶಿವಕುಮಾರ ಮಡಿವಾಳ, ರಾಜಕುಮಾರ ಉದನೂರ, ವಿಜಯಕುಮಾರ ಮರಗೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts