More

    ವಾರಿಯರ್ಸ್ ಸೇವೆ ಸರ್ವರಿಗೂ ಮಾದರಿ

    ಚಿಟಗುಪ್ಪ: ಕ್ಷೇತ್ರದಲ್ಲಿ ಕರೊನಾ ಹರಡದಂತೆ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸರು, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿ ಎಲ್ಲ ವಾರಿಯರ್ಸ್ ಸೇವೆ ಮಾದರಿ ಎಂದು ಶಾಸಕ ರಾಜಶೇಖರ ಪಾಟೀಲ್ ಶ್ಲಾಘಿಸಿದರು.
    ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಶುಕ್ರವಾರ ಪುರಸಭೆ ಸದಸ್ಯ ನಾಗರಾಜ ಹಿಬಾರೆ ಪರಿವಾರದಿಂದ 50 ಆಶಾ ಕಾರ್ಯಕರ್ತೆರು ಹಾಗೂ ಪೌರ ಕಾರ್ಮಿಕರಿಗೆ ಮತ್ತು ವಾರ್ಡ್​ 4ರಲ್ಲಿನ 250 ಕುಟುಂಬಗಳಿಗೆ 5 ಕೆಜಿ ಅಕ್ಕಿ, ತೊಗರಿ ಬೇಳೆ, ಎಣ್ಣೆ ತಲಾ 1ಕೆ.ಜಿ ಹಾಗೂ ಮಾಸ್ಕ್ಗಳ ವಿತರಣೆ ಚಾಲನೆ ನೀಡಿ ಮಾತನಾಡಿದ ಅವರು, ಕರೊನಾ ತಡಗಟ್ಟಲು ಸರ್ಕಾರ ಕೈಗೊಂಡ ಲಾಕ್ಡೌನ್ ಹಾಗೂ ನಿಯಂತ್ರಣಕ್ಕೆ ಶ್ರಮಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು.
    ತೊಂದರೆಯಲ್ಲಿರುವ ನಿರ್ಗತಿಕರು, ಬಡವರಿಗೆ ಕೈಲಾದಷ್ಟು ಸಹಾಯ ನೀಡಬೇಕು. ಹಿಬಾರೆ ಪರಿವಾರದ ಕಾರ್ಯ ಮಾದರಿಯಾಗಿದೆ. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಬೇಕು ಎಂದರು.
    ಬಡಾವಣೆಯಲ್ಲಿ ಸಮಸ್ಯೆಗಳ ಅಹವಾಲು ಸ್ವೀಕರಿಸಿದ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಹಿರಿಯಜೀವಿ ಭರತರಾವ ಹಿಭಾರೆ, ಪುರಸಭೆ ಸದಸ್ಯರಾದ ನಾಗರಾಜ ಹಿಬಾರೆ, ಮಹಾಂತಯ್ಯ ತೀರ್ಥ, ಇಸೂಫ್ ಸೌಧಾಗರ, ಆರೀಫ್ ಬಾವಗಿ, ಗೌಸ್, ವಿಜಯಕುಮಾರ ಜಗದಾಳೆ, ಪ್ರಮುಖರಾದ ವಿಷ್ಣುಕಾಂತ ಢಾವಳೇಗರ, ದತ್ತಕುಮಾರ ಚಿದ್ರಿ, ಸುರೇಶ ಅಷ್ಟೀಕರ್, ರಮೇಶ ಧುಮಾಳೆ, ರವಿ ಮಹಿಂದ್ರಕರ್, ಪುರಸಭೆ ಮುಖ್ಯಾಧಿಕಾರಿ ಮಹ್ಮದ್ ಇಸೂಫ್, ಶಿವಕುಮಾರ ಗೌಡನಗುರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts