More

    ವಾರಸುದಾರರ ಕೈ ಸೇರಿದ ಮೊಬೈಲ್‌ಗಳು

    ಹುಣಸೂರು: ಹುಣಸೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಪೊಲೀಸರು ತಂತ್ರಜ್ಞಾನದ ಸಹಾಯದಿಂದ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

    2021ರಿಂದ ಈವರೆಗೆ ಒಟ್ಟು 25ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು. ಈ ಪೈಕಿ ಮಂಗಳವಾರ ನಗರಠಾಣೆಯಲ್ಲಿ 19 ಮಂದಿಗೆ ಕಳೆದುಹೋಗಿದ್ದ 2.79 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳು ಮತ್ತೆ ಕೈಸೇರಿತು.

    ನಗರಠಾಣೆಯಲ್ಲಿ ಮೊಬೈಲ್ ವಿತರಿಸಿ ಮಾತನಾಡಿದ ಇನ್ಸ್‌ಪೆಕ್ಟರ್ ದೇವೇಂದ್ರ, ಮೊಬೈಲ್ ಕಳೆದುಕೊಂಡಿರುವ ದೂರುಗಳು ಸಾಕಷ್ಟು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮತ್ತು ಅಡಿಷನಲ್ ಎಸ್‌ಪಿ ನಂದಿನಿ ಅವರ ನಿರ್ದೇಶನದಂತೆ ಡಿವೈಎಸ್‌ಪಿ ಎಸ್.ಕೆ.ಮಹೇಶ್ ಮಾರ್ಗದರ್ಶನದಲ್ಲಿ ನಗರಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡು ಮೊಬೈಲ್ ಪತ್ತೆಗಾಗಿ ಕ್ರಮವಹಿಸಲಾಯಿತು. ಕಳೆದುಹೋದ ಮೊಬೈಲ್‌ನಲ್ಲಿ ಉಪಯೋಗವಾಗುತ್ತಿರುವ ಸಿಮ್ ನಂಬರ್ ಮತ್ತು ಲೊಕೇಶನ್ ವಿವರ ನೀಡಲು ಇಂಟರ್‌ನ್ಯಾಷನಲ್ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ (ಐಎಂಇಐ) ಪತ್ತೆಗಾಗಿ ಕಂಪನಿಗಳೊಂದಿಗೆ ಕೋರಿಕೆ ಸಲ್ಲಿಸಲಾಯಿತು. ಕಳೆದುಹೋಗಿದ್ದ ಮೊಬೈಲ್‌ನಲ್ಲಿ ಬಳಕೆಯಾಗುತ್ತಿರುವ ಸಿಮ್ ನಂಬರ್ ಮತ್ತು ಲೊಕೇಶನ್ ವಿವರಗಳನ್ನು ಪರಾಮರ್ಶೆ ಮಾಡಿ, ಮೊಬೈಲ್ ಬಳಸುತ್ತಿದ್ದವರಿಗೆ ಫೋನ್ ಮೂಲಕ ಮಾಹಿತಿ ನೀಡಿ ಮೊಬೈಲ್ ತಂದುಕೊಡಲು ಸೂಚಿಸಿದ ಅನ್ವಯ 19 ಮೊಬೈಲ್‌ಗಳು ಪತ್ತೆಯಾಗಿವೆ ಎಂದರು. ಎಸ್‌ಐ ಸಿ.ವಿ.ಶ್ರೀಧರ್ ಇತರ ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts