More

    ವಾತಾವರಣ ಶುದ್ಧವಾದರೆ ಆರೋಗ್ಯ

    ಬೆಳಗಾವಿ: ಪರಿಸರ ಶುದ್ಧವಾಗಿದ್ದಲ್ಲಿ ಯಾವುದೇ ರೋಗವನ್ನೂ ಎದುರಿಸಿ ಆರೋಗ್ಯಕರ ಜೀವನ ನಡೆಸಬಹುದು. ಉತ್ತಮ ಪರಿಸರಕ್ಕಾಗಿ ಮನೆಯ ಮುಂದೆ ಎಲ್ಲರೂ ಗಿಡ ನೆಟ್ಟು ಪೋಷಿಸಿ ಪರಿಸರ ಬೆಳೆಸಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

    ವಿಶ್ವ ಪರಿಸರ ದಿನದ ನಿಮಿತ್ತ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶನಿವಾರ ಗಿಡ ನೆಟ್ಟು ಮಾತನಾಡಿದ ಅವರು, ಪರಿಸರ ರಕ್ಷಣೆ ಕಾರ್ಯ ಸಮಂಜಸವಾಗಿ ಆಗುತ್ತಿಲ್ಲ. ಹೀಗಾಗಿಯೇ ಇಂದು ನಾವು ಮನೆಯಿಂದ ಹೊರ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸಹಜ, ಸರಳವಾಗಿದ್ದ ಆಮ್ಲಜನಕ ಸಿಗುತ್ತಿಲ್ಲ ಎಂದು ಸಾಕಷ್ಟು ಪರಿಶ್ರಮ ಪಡುತ್ತಿದ್ದೇವೆ. ಅದಕ್ಕೆ ಕಾರಣ, ಮರಗಳನ್ನು ಉಳಿಸಿ ಬೆಳೆಸುವಲ್ಲಿ ವಿಫಲವಾಗಿದ್ದೇವೆ. ಆಲ, ಬೇವು, ಪತ್ರಿ, ಅರಳಿ ಸೇರಿದಂತೆ ಸಾಕಷ್ಟು ಮರಗಳನ್ನು ಈ ಹಿಂದೆ ಬೆಳೆಸುತ್ತಿದ್ದೆವು. ಅದರಿಂದ ಸಾಕಷ್ಟು ಲಾಭ ಜನರಿಗೇ ಸಿಗುತ್ತಿತ್ತು ಎಂದು ಸ್ಮರಿಸಿದರು.

    ಸದ್ಯದ ಪರಿಸ್ಥಿತಿಯಲ್ಲಿ ಕರೊನಾ ಸೋಂಕಿತರು ಆಕ್ಸಿಜನ್‌ಗಾಗಿ ಪರದಾಡುತ್ತಿದ್ದಾರೆ. ಈಗಲೂ ನಾವೆಲ್ಲ ಪರಿಸರ ಉಳಿಸಿ ಬೆಳೆಸದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಅರಳಿಮರ ದಿನದ 24 ಗಂಟೆಯೂ ಆಮ್ಲಜನಕ ಕೊಡುತ್ತದೆ. ಆಲದ ಮರ ದಿನಕ್ಕೆ 20 ಗಂಟೆ, ಬೇವಿನ ಮರ 18 ಗಂಟೆಗಳ ಕಾಲ ಆಮ್ಲಜನಕ ಬಿಡುಗಡೆ ಮಾಡುತ್ತದೆ. ಹೀಗಾಗಿ ಪ್ರತಿಯೊಂದು ಮರಗಳನ್ನು ನಾವು ಬೆಳೆಸುವುದರಿಂದ ಮಾನವನಿಗಷ್ಟೇ ಅಲ್ಲ, ಎಲ್ಲ ಜೀವ ಸಂಕುಲಕ್ಕೂ ವರದಾನವಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಪರಿಸರ ನಾಶ ಮಾಡುತ್ತಿರುವುದರಿಂದ ನಮ್ಮನ್ನು ನಾವೇ ವಿಕೋಪಕ್ಕೆ ತಳ್ಳಿಕೊಳ್ಳುತ್ತಿದ್ದೇವೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು. ಗುರುಸಿದ್ದಯ್ಯ ಹಿರೇಮಠ, ಮಹಾಂತೇಶ ಶಾಸ್ತ್ರಿ ಉಗುರಕೋಡ, ಮಹಾಂತೇಶ ಶಾಸ್ತ್ರೀ ಚಿಕ್ಕೋಡಿ ಸೇರಿದಂತೆ ಹಲವು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts