More

    ಮುಂದಿನ ಪೀಳಿಗೆಯ ಆರೋಗ್ಯಕ್ಕಾಗಿ ಗಿಡ ನೆಡಿ

    ಕೊಕಟನೂರ: ಎಲ್ಲ ಗ್ರಾಮಗಳಲ್ಲೂ ಪ್ರತಿಯೊಂದು ಕುಟುಂಬ ಎರಡೆರಡು ಗಿಡ ನೆಟ್ಟು ಬೆಳೆಸಿದರೆ ಮುಂದಿನ ಪೀಳಿಗೆಗೆ ಉತ್ತಮ ಗಾಳಿ ಸಿಗಲು ಅನುಕೂಲವಾಗುತ್ತದೆ ಎಂದು ಜಿಪಂ ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ಧಪ್ಪ ಮುದಕಣ್ಣವರ ಹೇಳಿದರು.

    ಗ್ರಾಮದಲ್ಲಿ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿ 1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪವಿತ್ರ ವನ ಹಾಗೂ 10 ಲಕ್ಷ ರೂ. ಮೊತ್ತದಲ್ಲಿ ಸರ್ಕಾರಿ ಪ್ರೌಢಶಾಲೆ ಮೈದಾನ ಅಭಿವೃದ್ಧಿ ಕಾಮಗಾರಿಯನ್ನು ಬುಧವಾರ ವೀಕ್ಷಿಸಿ ಮಾತನಾಡಿದ ಅವರು, ಇಂದು ನಗರ ಪ್ರದೇಶದಲ್ಲಿ ಜನರು ಉಸಿರಾಟ ತೊಂದರೆ ನ್ಯುಮೋನಿಯಾದಿಂದ ಬಳಲುತ್ತಿರುವುದಕ್ಕೆ ಪರಿಸರ ಮಾಲಿನ್ಯವೇ ಕಾರಣವಾಗಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಗಿಡಮರ ಬೆಳೆಸುವ ಪ್ರವೃತ್ತಿ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ಯೋಜನೆಗಳಿಂದ ಪ್ರಯೋಜನ ಪಡೆದು ಗಿಡಮರ ಬೆಳೆಸುವ ಕೆಲಸ ಆಗಬೇಕು ಎಂದು ತಿಳಿಸಿದರು.

    ಡಿಎಸ್‌ಎಸ್ ಸಂಚಾಲಕ ಪ್ರಶಾಂತ ಕಾಂಬಳೆ ಮಾತನಾಡಿ, ಗಿಡಮರ ಕಡಿದು ಹೆದ್ದಾರಿ ನಿರ್ಮಿಸಿದ ಪ್ರತಿಫಲವಾಗಿ ಇಂದು ನಾವು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕಾಗಿದೆ ಎಂದರು. ಅರ್ಜುನ ಪೂಜಾರಿ, ಅನಿಲ ಮುಳಿಕ, ಕುಮಾರ ವೀರಗೌಡ, ಗೋಪಾಳ ಬಣಜ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ಹನುಮಂತ ಮಾದರ, ಗುಳಪ್ಪ ಪೂಜಾರಿ, ಸತೀಶ ದೊಡಮನಿ, ಶ್ರೀಧರ ಹಂಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts