More

    ವಾಣಿಜ್ಯ ಕಟ್ಟಡ ನಿರ್ಮಾಣದ ವಿರುದ್ಧ ಧರಣಿ

    ರಾಣೆಬೆನ್ನೂರ: ನಗರದ ಮೇಡ್ಲೇರಿ ರಸ್ತೆಯ ಅಂಜುಮನ್ ಸಂಸ್ಥೆಗೆ ಸೇರಿದ ಸ್ಮಶಾನ ಜಾಗದಲ್ಲಿ ಅನಧಿಕೃತವಾಗಿ ನಿರ್ವಿುಸುತ್ತಿರುವ ವಾಣಿಜ್ಯ ಮಳಿಗೆ ಕಟ್ಟಡ ಕಾಮಗಾರಿಯನ್ನು ತಡೆಯಲು ಆಗ್ರಹಿಸಿ ನಗರದ ಸಾರ್ವಜನಿಕರು ಸೋಮವಾರ ನಗರಸಭೆ ಎದುರು ಧರಣಿ ನಡೆಸಿದರು.

    ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಸ್ಮಶಾನ ಜಾಗದಲ್ಲಿ ಅಂಜುಮನ್ ಸಂಸ್ಥೆಯವರು ನಗರಸಭೆಯಿಂದ ಪರವಾನಗಿ ಇಲ್ಲದೇ ವಾಣಿಜ್ಯ ಕಟ್ಟಡ ನಿರ್ವಿುಸುತ್ತಿದ್ದಾರೆ. ಇದನ್ನು ತಡೆಯುವಂತೆ ನ್ಯಾಯಾಲಯದಿಂದ ಆದೇಶವೂ ಆಗಿದೆ. ಆದರೆ, ನಗರಸಭೆ ಅಧಿಕಾರಿಗಳು ಅಂಜುಮನ್ ಸಂಸ್ಥೆಯವರಿಗೆ ಕೇವಲ ನೋಟಿಸ್ ಕೊಟ್ಟು ಸುಮ್ಮನಿದ್ದಾರೆ ಎಂದು ಆರೋಪಿಸಿದರು.

    ನಗರಸಭೆ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಂಡು ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತಡೆಯಬೇಕು. ಅಲ್ಲಿಯವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಬಂದ ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಮಾತನಾಡಿ, ಅನಧಿಕೃತವಾಗಿ ನಿರ್ವಿುಸುತ್ತಿರುವ ಕಟ್ಟಡದ ಕಾಮಗಾರಿಯನ್ನು ಈಗಾಗಲೇ ತಡೆಯಲಾಗಿದೆ. ಕಟ್ಟಡದ ಸದ್ಯದ ಸ್ಥಿತಿ ಫೋಟೋ ಮಾಡಲಾಗಿದೆ. ಮುಂದಿನ ದಿನದಲ್ಲಿ ಕಾಮಗಾರಿ ನಡೆಸಿದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು. ನಂತರ ಧರಣಿ ಕೈ ಬಿಡಲಾಯಿತು.

    ಪ್ರಮುಖರಾದ ರಾಯಣ್ಣ ಮಾಕನೂರ, ನಾಗರಾಜ ಕೆಳಗಿನಮನಿ, ಶಿವಪ್ಪ ಕೂಸಗೂರ, ಮಂಜಪ್ಪ ಎಚ್.ಬಿ., ಸಿದ್ದಪ್ಪ ಗುಡಿಮುಂದಿನವರ, ಧರ್ಮಪ್ಪ ಮೆಗಳಮನಿ, ಮಲ್ಲೇಶ ಕೋಣನವರ, ನಾಗರಾಜ ಬಣಕಾರ, ಬಸವಣ್ಣೆಪ್ಪ ಹೊನ್ನಕಳ್ಳನವರ, ನಾಗಪ್ಪ ಕೊರವರ, ಎನ್.ಎನ್. ಜ್ಯೋತಿ, ಕುಮಾರ ದೊಡ್ಮನಿ, ಶ್ರೀಕಾಂತ ಸಣ್ಣಮನಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts