More

    ವಸೂಲಿ ಇರುವವರಿಗೆ ಪ್ರಶಸ್ತಿ

    ಕಲಬುರಗಿ: ಕರ್ನಾಟಕವೆಂದರೆ ಕೇವಲ ಬೆಂಗಳೂರಲ್ಲ. ಯಾವುದೇ ಪ್ರಶಸ್ತಿ ಸಮಿತಿ ಇದ್ದರೂ ಬೆಂಗಳೂರಿನವರೇ ಇರುತ್ತಾರೆ. ಸರ್ಕಾರದ ಪ್ರಶಸ್ತಿಗಳು ಜಾತಿ, ಹಣದ ವಸೂಲಿ ಇರುವವರಿಗೆ ದೊರೆಯುತ್ತಿರುವುದು ನೋವಿನ ಸಂಗತಿ ಎಂದು ಬಂಡಾಯ ಸಾಹಿತಿ ಡಾ.ಸತ್ಯಾನಂದ ಪಾತ್ರೋಟ ಕಳವಳ ವ್ಯಕ್ತಪಡಿಸಿದರು.
    ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಚೆನ್ನಣ್ಣ ವಾಲೀಕಾರ ಅವರ ೮೨ನೇ ಜನ್ಮದಿನಾಚರಣೆಯಲ್ಲಿ ರಾಜ್ಯಮಟ್ಟದ ವ್ಯೋಮಾ ವ್ಯೋಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಬುದ್ಧ-ಬಸವಣ್ಣ-ಅಂಬೇಡ್ಕರ್ ಎಲ್ಲರೂ ಬರೆದಂತೆ ಬದುಕಿದರು. ಅವರಂತೆ ಲೇಖಕರೂ ಬದುಕಬೇಕು. ಪ್ರಶಸ್ತಿಗಳು ಹೇಗಾಗಿವೆ ಎಂದರೆ ನನಗೊಂದು ಪ್ರಶಸ್ತಿ, ನಿನಗೊಂದು ಪ್ರಶಸ್ತಿ ಎಂಬ ಒಪ್ಪಂದಗಳು ಇವತ್ತು ಹೆಚ್ಚಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
    ಎಲ್ಲರೂ ಒಂದಾಗುವ ಭಾರತ-ನಮ್ಮದು. ಬಹುತ್ವ-ಭಾರತ, ಅದರಂತೆ ಕರ್ನಾಟಕದಲ್ಲಿರುವ ಅಸಮಾನತೆ ತೊಲಗಿ ಒಂದೇ ಕರ್ನಾಟಕ ಆಗಬೇಕು. ಅಂತೆಯೇ ಒಂದೇ ಭಾರತ ಅದು ಬಹುತ್ವ ಭಾರತ ಆಗಬೇಕು ಎಂದರು.
    ಬೆAಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಚಿತ್ತಯ್ಯ ಪೂಜಾರ ಮಾತನಾಡಿ, ಚೆನ್ನಣ್ಣ ವಾಲೀಕಾರ ಜನಸಾಮಾನ್ಯರ ಕವಿ ಅಷ್ಟೇ ಅಲ್ಲ ಅವರೊಬ್ಬ ಅಂಬೇಡ್ಕರ್‌ರ ಶ್ರೇಷ್ಠ ಅನುಯಾಯಿ, ಹಾಡುಗಾರ, ವಿದ್ವಾಂಸ, ಕಾದಂಬರಿಕಾರ ಎಂದು ಹೇಳಿದರು.
    ಡಾ.ಸತ್ಯಾನಂದ ಪಾತ್ರೋಟ ಅವರಿಗೆ ಪ್ರದಾನ ಮಾಡಿ ಮಾತಾಡಿದರು. ಚೆನ್ನಣ್ಣ ವಾಲೀಕಾರ ಹಾಗೂ ಸತ್ಯಾನಂದ ಪಾತ್ರೋಟ ಇಬ್ಬರೂ ಕನ್ನಡ ನಾಡಿನ ತಳವರ್ಗದ ಜನಸಮುದಾಯದ ಧ್ವನಿಯಾದವರು ಎಂದು ಬಣ್ಣಿಸಿದರು.
    ಚೆನ್ನಣ್ಣನವರು ಕಣ್ಣಿಗೆ ಕಾಣುವ ಜನರನ್ನು ಪ್ರೀತಿಸುವ ಗುಣ-ಹೊಂದಿದ್ದರು ಎಂದು ಡಾ.ಸ್ವಾಮಿರಾವ ಕುಲಕರ್ಣಿ ಬಣ್ಣಿಸಿದರು. ಸಿದ್ಧಮ್ಮ ವಾಲೀಕಾರ, ಅಪ್ಪಾಸಾಹೇಬ ವಾಲೀಕಾರ, ಡಾ.ಕೆ.ಎಸ್.ಬಂಧು ಇತರರಿದ್ದರು. ಪ್ರೊ.ಎಚ್.ಟಿ.ಪೋತೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಶರಣಬಸಪ್ಪ ಕೋಡ್ಲಿ ನಿರೂಪಣೆ ಮಾಡಿದರು. ಡಾ.ಸುಲಾಬಾಯಿ ಹಿತವಂತ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts